-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗಂಡನನ್ನೂ  ಕೊಂದು , ಲವರ್ ಗೆ ಗಂಡನ ಮುಖವನ್ನು  ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ಪಾಪಿ ಹೆಂಡತಿ

ಗಂಡನನ್ನೂ ಕೊಂದು , ಲವರ್ ಗೆ ಗಂಡನ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ ಪಾಪಿ ಹೆಂಡತಿ


ತೆಲುಗಿನ ಸೂಪರ್ ಹಿಟ್ ಚಿತ್ರ ಎವಡು ನೆನಪಿರಬೇಕು ಅ  ಚಿತ್ರದಲ್ಲಿ  ನಟ ಅಲ್ಲು ಅರ್ಜುನ್ ಮೇಲೆ ಮಾರಣಾಂತಿಕ ಹಲ್ಲೆಯಾಗಿ ಆತನ ಮುಖ ಬೆಂಕಿಯಲ್ಲಿ ಬೆಂದು ಹೋಗಿರುತ್ತದೆ. ಆಗ ಆತನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿ ಮತ್ತೋರ್ವ ನಾಯಕನ ಮುಖದಂತೆ ಬದಲಾವಣೆ ಮಾಡಲಾಗುತ್ತದೆ ಹಾಗೆಯೇ ಇಲ್ಲಿ ಒಬ್ಬಳು  ಮಹಿಳೆ ಚಿತ್ರದಂತೆ  ತನ್ನ ಲವರ್ ನೊಂದಿಗೆ ಜೀವನ ನಡೆಸಲು ತನ್ನ ಗಂಡನನ್ನೇ ಕೊಲೆ ಗೈದು ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಲವರ್ ಗೆ ತನ್ನ ಗಂಡ ಮುಖದಂತೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ, ಅಷ್ಟಕ್ಕೂ ಈ ಘಟನೆ ತೆಲಂಗಾಣದ ನಗರ್ ಕರ್ನೂಲ್ ಅಲ್ಲಿ ನಡೆದಿದೆ.
ಸ್ವಾತಿ ಎಂಬ ಮಹಿಳೆ ಸುಧಾಕರ್ ರೆಡ್ಡಿ ಎಂಬಾತನನ್ನು ಮದುವೆಯಾಗಿದ್ದಳು. ದಂಪತಿಗಳಿಗೆ ಈಗಾಗಲೇ ಇಬ್ಬರು ಮಕ್ಕಳು ಕೂಡ ಇದ್ದು, ಮದುವೆ ಬಳಿಕ ಸ್ವಾತಿಗೆ ರಾಜೇಶ್ ಎಂಬಾತನೊಂದಿಗೆ ಪರಿಚಯವಾಗಿದೆ. ಪರಿಚಯ ಸ್ನೇಹ- ಪ್ರೀತಿಗೆ ತಿರುಗಿದ್ದು, ದಿನಗಳೆದಂತೆ ಪ್ರೀತಿ ದೈಹಿಕ ಸಂಬಂಧಕ್ಕೂ ತಿರುಗಿದೆ. ಸ್ವಾತಿ ಮತ್ತು ರಾಜೇಶ್ ಯಾರಿಗೂ ತಿಳಿಯದಂತೆ ಅಕ್ರಮ ಸಂಬಂಧ ಮುಂದುವರೆಸಿದ್ದು, ಒಂದು ದಿನ ತನ್ನ ಗಂಡನನ್ನು ದೂರ ಮಾಡುವ ಮೂಲಕ ಶಾಶ್ವತವಾಗಿ ಲವರ್ ನೊಂದಿಗೇ ಇರಲು ಸ್ವಾತಿ ನಿರ್ಧರಿಸಿದ್ದಳು.
ಇದಕ್ಕಾಗಿ ಆತನ ಕೊಲೆಗೆ ನಿರ್ಧರಿಸಿದ ಸ್ವಾತಿ ತನ್ನ ಲವರ್ ನೊಂದಿಗೆ ಸೇರಿ 2017ರ ನವೆಂಬರ್ 26ರಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಪತಿ ಸುಧಾಕರ್ ನನ್ನು ಹತ್ಯೆಗೈದಿದ್ದಾರೆ, ಬಳಿಕ ಸುಧಾಕರ್ ರೆಡ್ಡಿ ಶವವನ್ನು ಸಮೀಪದ ನಿರ್ಜನ ಅರಣ್ಯದೊಳಗೆ ಕೊಂಡೊಯ್ದು ಸುಟ್ಟು ಹಾಕಿದ್ದಾರೆ. ಈ ವಿಚಾರ ಬಹಿರಂಗವಾಗಬಾರದು ಎಂದು ನಿರ್ಧರಿಸಿದ್ದ ಸ್ವಾತಿ ಅಪಘಾತದ ನಾಟಕವಾಡಿ ತಾನು ಮತ್ತು ತನ್ನ ಲವರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.ತೆಲುಗು ಸಿನಿಮಾ ಎವಡು ನಲ್ಲಿರುವಂತೆ ತನ್ನ ಲವರ್ ಮುಖವನ್ನು ತನ್ನ ಗಂಡನ ಮುಖದಂತೆ ಬದಲಾಯಿಸಲು ನಿರ್ಧರಿಸಿದ್ದ ಸ್ವಾತಿ, ಪತಿ ಸುಧಾಕರ್ ಕುಟುಂಬದಿಂದಲೇ ರಾಜೇಶ್ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಕೂಡ ಮಾಡಿಸಿದ್ದಾಳೆ. ಇದಕ್ಕಾಗಿ ನುರಿತ ತಜ್ಞರಿಂದ ಲವರ್ ರಾಜೇಶ್ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿಸಿದ್ದಾಳೆ. ಆದರೆ ಮಗ ಸುಧಾಕ‌ರ್ ಆರೈಕೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದ ಪೋಷಕರಿಗೆ ಆತನ ವರ್ತನೆಯಲ್ಲಿ ಅನುಮಾನ ಕಂಡುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರಾಜೇಶ್ ನನ್ನು ಬಂಧಿಸಿ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಎಲ್ಲವೂ ಬಯಲಾಗಿದೆ. ಪ್ರಸ್ತುತ ಪತ್ನಿ ಸ್ವಾತಿ ಮತ್ತು ಲವರ್ ರಾಜೇಶ್ ಪೊಲೀಸ್‌ ವಶದಲ್ಲಿದ್ದು, ರಾಜೇಶ್ ಮುಖಕ್ಕೆ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಸ್ವಾತಿ ರೆಡ್ಡಿ ಜೈಲು ಸೇರಿದ್ದಾಳೆ.


Ads on article

Advertise in articles 1

advertising articles 2

Advertise under the article

ಸುರ