.ತೂಕವನ್ನು ಕಡಿಮೆ ಮಾಡಲು ಮನೆಯಲ್ಲೆ ರೆಡಿ ಮಾಡಿ ಆರೋಗ್ಯಕರವಾದ ಜ್ಯೂಸ್, ಜ್ಯೂಸ್ ತಯಾರಿಕೆ ಬಗ್ಗೆ ಇಲ್ಲಿದೆ ವಿವರ
ಆರೋಗ್ಯಕರ ಆಹಾರಗಳ ಸೇವನೆಯ ಜೊತೆ ನಿಯಮಿತ ವ್ಯಾಯಾಮ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬುದು ಗೊತ್ತು ಇದರ ಜೊತೆಗೆ ಈ 2 ಪಾನೀಯವನ್ನು ನೀವು ಮುಂಜಾನೆ ಸೇವಿಸಿದರೆ ತೂಕನಷ್ಟ ಇನ್ನು ಸುಲಭ ಆಗುತ್ತದೆ
ವೇಸ್ಟ್ ಲಾಸ್ ಮಾಡಿಕೊಳ್ಳಲು ಹಲವರು ಪ್ರಯತ್ನಿಸುತ್ತಿರುತ್ತಾರೆ. ಸುಲಭವಾಗಿ ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ಹಲವರ ಸಲಹೆಗಳನ್ನು ಪಾಲಿಸುತ್ತಾರೆ. ಅಂತಹ ಸಲಹೆಗಳಲ್ಲಿ ಪಾನೀಯಗಳು ಸೇರಿವೆ. ನೀವು ಮಾಡುವ ಸಣ್ಣ ತಪ್ಪು ದೊಡ್ಡ ಸಮಸ್ಯೆಯಾಗಬಹುದು
ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು, ಆಹಾರದಲ್ಲಿ ಉತ್ತಮ ಆಹಾರವನ್ನು ತೆಗೆದುಕೊಳ್ಳುವುದ್ದಾರ ಜೊತೆಗೆ ಸರಿಯಾದ ಜೀವನಶೈಲಿಯನ್ನು ಅನುಸರಿಸುವುದರಿಂದ ಸಂತೋಷವಾದ ಜೀವನ ನಡೆಸಬಹುದು.
ತೂಕ ಇಳಿಕೆ ಮಾಡಲು ಸಹಾಯ ಮಾಡುವ ಜ್ಯೂಸ್ ಗಳ ವಿವರ ಇಲ್ಲಿದೆ
ವೆಸ್ಟ್ ಲಾಸ್ ಮಿರಾಕಲ್ ಡ್ರಿಂಕ್ ಮಾಡುವ ವಿಧಾನ
ಬೇಕಾಗುವ ಸಾಮಾಗ್ರಿಗಳು
ನೀರು - 1 ಲೀಟರ್
ಶುಂಠಿ ತುರಿ-ಅರ್ಧ ಟೀ ಸ್ಪೂನ್
ಜೀರಿಗೆ- 1 ಟೀ ಸ್ಪೂನ್
ಮೆಣಸು - 1 ಟೀ ಸ್ಪೂನ್
ಜೇನುತುಪ್ಪ - 1 ಟೀ ಸ್ಪೂನ್
ನಿಂಬೆ ರಸ - 1 ಟೀ ಸ್ಪೂನ್
ಪಾನೀಯ ಮಾಡುವ ವಿಧಾನ
ಸ್ಟವ್ ಮೇಲೆ ಒಂದು ದೊಡ್ಡ ಪಾತ್ರೆ ಇಟ್ಟು ಅದಕ್ಕೆ 1 ಲೀಟರ್ ನೀರನ್ನು ಹಾಕಬೇಕು. ಕುದಿಯುವ ನೀರಿಗೆ 1 ಟೀ ಸ್ಪೂನ್ ಮೆಣಸು, 1 ಟೀ ಸ್ಪೂನ್ ಜೀರಿಗೆ, ಶುಂಠಿ ತುರಿಯನ್ನು ಸೇರಿಸಿ 5 ನಿಮಿಷ ಕುದಿಸಬೇಕು.
5 ನಿಮಿಷ ಬಳಿಕ ನೀರನ್ನು ಲೋಟದೊಳಗೆ ಹಾಕಿಕೊಂಡು 1 ಟೀ ಸ್ಪೂನ್ ನಿಂಬೆರಸ, 1 ಟೀ ಸ್ಪೂನ್ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ನಿಂಬೆ ಮತ್ತು ಶುಂಠಿ ಎರಡೂ ಕೊಬ್ಬನ್ನು ಸುಡುತ್ತದೆ. ಜೇನುತುಪ್ಪ ಸಹ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ವೆಸ್ಟ್ ಲಾಸ್ ಮಿರಾಕಲ್ ಡ್ರಿಂಕ್-2
ಬೇಕಾಗುವ ಸಾಮಾಗ್ರಿಗಳು
ಅರಶಿನ ಚಿಟಿಗೆ
ನೀರು-1 ಗ್ಲಾಸ್
ಪಾನೀಯ ಮಾಡುವ ವಿಧಾನ
*ಮೊದಲಿಗೆ ಗ್ಲಾಸ್ ನಲ್ಲಿ ನೀರಾಕಿಕೊಂಡು ಅದಕ್ಕೆ ಚಿಟಿಕೆ ಅರಿಶಿಣಪುಡಿ, ನಿಂಬೆ ರಸ 1 ಟೀ ಸ್ಪೂನ್, ಅರ್ಧ ಟೀ ಸ್ಪೂನ್ ಶುಂಠಿ ತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಹಾಗೇ ಬಿಡಬೇಕು.
ಎಲ್ಲವನ್ನೂ ಮಿತವಾಗಿ ಬಳಸಿ ಆರೋಗ್ಯವಾಗಿ ಇರಿ