ತಿರುಮಲ ವೆಂಕಟರಮಣನನ್ನು ಕಾಣಲು ಗೋವಿಂದ... ಗೋವಿಂದ.. ಎಂದು ಮೆಟ್ಟಿಲುಗಳನ್ನು ಮೊಣಕಾಲಿನಲ್ಲಿ ಹತ್ತಿದ ಜಾನ್ವಿ ಕಪೂರ್
Friday, March 22, 2024
ಬೆಂಗಳೂರು: ಬಾಲಿವುಡ್ ನಟಿ ಜಾನ್ವಿ ಕಪೂರ್ ಆಗಾಗ ತಿರುಮಲಕ್ಕೆ ಹೋಗಿ ವೆಂಕಟರಮಣನ ದರ್ಶನ ಪಡೆಯುತ್ತಲೇ ಇರುರುತ್ತಾರೆ. ತಮ್ಮ ಜನ್ಮದಿನ, ಹಬ್ಬಗಳು, ವಾರ್ಷಿಕೋತ್ಸವಗಳು ಮತ್ತು ಇತರ ಹಲವು ವಿಶೇಷ ಸಂದರ್ಭ ಅವರು ಏಳುಬೆಟ್ಟಗಳ ಒಡೆಯನ ದರ್ಶನ ಪಡೆಯುತ್ತಿರುತ್ತಾರೆ. ಜಾನ್ವಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಮಾರ್ಚ್ 6ರ ಕಾಲ್ನಡಿಗೆಯಲ್ಲಿ ಶ್ರೀವರನ ದರ್ಶನ ಪಡೆದಿದ್ದಾರೆ.
ಜಾನ್ವಿ ಕಪೂರ್ ರೊಂದಿಗೆ ಸ್ನೇಹಿತರಾದ ಶಿಖರ್ ಪಹಾರಿ ಮತ್ತು ಓರಿ ಜೊತೆಗಿದ್ದರು. ಇತ್ತೀಚೆಗಷ್ಟೇ ತಿರುಮಲ ಯಾತ್ರೆಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ವೀಡಿಯೋ ರೂಪದಲ್ಲಿ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿರುವ ಜಾಹ್ನವಿ ಕಪೂರ್ ಅವರ ಮನೆಯಿಂದ ಕಾರಿನಲ್ಲಿ ಹೊರಟು ಮೂರು ಗಂಟೆಗಳಲ್ಲಿ ತಿರುಪತಿ ತಲುಪಿದ್ದಾರೆ. ಅಲ್ಲಿಂದ ಜಾನ್ವಿ ಕಪೂರ್ ತನ್ನ ಕುಟುಂಬ ಮತ್ತು ಸಂಬಂಧಿಕರೊಂದಿಗೆ ನಡೆದುಕೊಂಡು ತಲುಪಿದರು. ಆದರೆ ಜಾನ್ವಿ ಕಪೂರ್ - ಶಿಖರ್ ತಿರುಮಲ ದೇವಸ್ಥಾನದ ಮೆಟ್ಟಿಲುಗಳನ್ನು ಮೊಣಕಾಲು ಹತ್ತಿದರು. ಜಾಹ್ನವಿ ಇದುವರೆಗೆ ಸುಮಾರು 50 ಬಾರಿ ತಿರುಮಲಕ್ಕೆ ಭೇಟಿ ನೀಡಿದ್ದಾರೆ ಎಂದು ಓರಿ ಈ ವಿಡಿಯೋದಲ್ಲಿ ಹೇಳಿದ್ದಾರೆ.
ತನಗೆ ಈ ದೇವಸ್ಥಾನ ತುಂಬಾ ಇಷ್ಟ, ಸಾಧ್ಯವಾದರೆ ಇಲ್ಲೇ ವಿವಾಹವಾಗುತ್ತೇನೆ ಎಂದು ಜಾನ್ವಿ ಈ ಹಿಂದೆ ಹಲವು ಬಾರಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಓರಿ ಶೇರ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾನ್ವಿ ಕಪೂರ್ ತೆಲುಗಿನಲ್ಲಿ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜಾನ್ವಿ, ರಾಮ್ ಚರಣ್ ಜತೆ ನಟಿಸಲಿದ್ದಾರೆ. ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸಾನಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.