ಮೊಸಳೆ ಅಟ್ಯಾಕ್ ಸಾವಿನ ದವಡೆಯಿಂದ ಸ್ವಲ್ಪದರದಲ್ಲೇ ಪಾರಾದ ಮೃಗಾಲಯ ಸಿಬ್ಬಂದಿ



ಕೇಪ್‌ಟೌನ್‌: ಮೃಗಾಲಯ ಸಿಬ್ಬಂದಿಯೊಬ್ಬರು 15 ಅಡಿ ಉದ್ದದ ದೈತ್ಯ ಮೊಸಳೆಯ ಆಕ್ರಮಣದಿಂದ ಸ್ವಲ್ಪದರಲ್ಲೇ ಬಚಾವ್‌ ಆಗಿ ಬದುಕಿ ಉಳಿದಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಘಟನೆ ಕಳೆದ ರವಿವಾರ ಕ್ವಾಜುಲು ನಟಾಲ್‌ನ ಬಲ್ಲಿಟೊದಲ್ಲಿರುವ ಪ್ರೊಕೊಡೈಲ್ ಕ್ರೀಕ್ ಥೀಮ್ ಪಾರ್ಕ್‌ ನಡೆದಿದೆ. ಮೃಗಾಲಯದ ಅನುಭವಿ ಮೊಸಳೆ ತಜ್ಞರೊಬ್ಬರು ಮೃಗಾಲಯಕ್ಕೆ ಭೇಟಿ ನೀಡಿರುವ ಪ್ರವಾಸಿಗರಿಗೆ ಮೊಸಳೆ ಬಳಿ ನಿಂತು ಪ್ರದರ್ಶನ ನೀಡುತ್ತಿದ್ದರು. ಅವರ ಬಳಿ ದೈತ್ಯ ಗಾತ್ರದ ಎರಡು ಮೊಸಳೆಗಳು ಇರುವುದು ವೀಡಿಯೋದಲ್ಲಿ ದಾಖಲಾಗಿದೆ. ಅವರು ಕೋಲನ್ನು ಹಿಡಿದು ಮೊಸಳೆ ಮೈಯಿಗೆ ಚುಚ್ಚುವಾಗ ಆಕ್ರೋಶಗೊಂಡ ಮೊಸಳೆ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದೆ.

ಆದರೆ ಸಿಬ್ಬಂದಿಯ ಅದೃಷ್ಟ ಚೆನ್ನಾಗಿತ್ತು. ಮೊಸಳೆಯ ದವಡೆಗಳಿಗೆ ಸರಿಯಾಗಿ ಸಿಗದಿದ್ದರಿಂದ ಅವರು ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಆ ಮೊಸಳೆಯು ನೈಲ್ ಮೊಸಳೆಯಾಗಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಮೊಸಳೆಗಳ ಜಾತಿಗಳಲ್ಲಿ ಇದು ದೊಡ್ಡದಾಗಿದೆ. ಮೊಸಳೆ, ಮೃಗಾಲಯದ ಸಿಬ್ಬಂದಿಯನ್ನು ಹಿಡಿದುಕೊಳ್ಳುತ್ತಿದ್ದಂತೆ ಪ್ರವಾಸಿಗರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಅಷ್ಟರಲ್ಲಿ ಮೊಸಳೆಯೇ ತನ್ನ ದವಡೆಯನ್ನು ಸಡಿಲಗೊಳಿಸಿದಾಗ ಸಿಬ್ಬಂದಿ ಅದರಿಂದ ಬಿಡಿಸಿಕೊಂಡು ಬಚಾವ್‌ ಆಗಿದ್ದಾರೆ. ಅವರ ಕಾಲಿಗೆ ಮಾತ್ರ ಗಾಯಳಾಗಿವೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಜೂ ಕೀಪರ್ ಅದೃಷ್ಟ ಚೆನ್ನಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಪ್ರಾಣಿಗಳ ನಡುವೆ ಇಂತಹ ವರ್ತನೆ ಸರಿಯಲ್ಲ ಎಂದು ಜೂ ಕೀಪರ್ ನಡೆಯನ್ನು ಖಂಡಿಸಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
BREAKING NEWS
Loading latest news...
Join our WhatsApp Channel Powered By : Online Pudu