ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆ: ಕೊಯಮತ್ತೂರಿನಿಂದ ಅಣ್ಣಾಮಲೈಗೆ ಟಿಕೆಟ್


ನವದೆಹಲಿ: ಬಿಜೆಪಿ ತಮಿಳುನಾಡಿನ ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿ ಪಕ್ಷವು ಚೆನ್ನೈ ದಕ್ಷಿಣದಿಂದ ತೆಲಂಗಾಣದ ಮಾಜಿ ತಮಿಳಿಸೈ ಸೌಂದರರಾಜನ್, ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್ ಮತ್ತು ತೂತುಕ್ಕುಡಿಯಿಂದ ನೈನಾರ್ ನಾಗೇಂದ್ರನ್ ಅವರಿಗೆ ಟಿಕೆಟ್ ನೀಡಿದೆ.‌ ರಾಧಾಕೃಷ್ಣನ್ ಮೋದಿ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದರು ಮತ್ತು ಕನ್ಯಾಕುಮಾರಿಯ ಮಾಜಿ ಸಂಸದರೂ ಆಗಿದ್ದಾರೆ. ವೆಲ್ಲೂರಿನಿಂದ ಪುತಿಯಾ ನೀಧಿ ಕಚ್ಚಿ (ಪಿಎನ್‌ಕೆ) ಮುಖ್ಯಸ್ಥ ಎಸಿ ಷಣ್ಮುಗಂ ಮತ್ತು ತಮಿಳುನಾಡಿನ ಪೆರಂಬಲೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಟಿಆರ್ ಪರಿವೇಂದರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ.

ಟಿಆರ್ ಪಾರಿವೇಂದರ್ ಅವರು ಭಾರತೀಯ ಜನನಾಯಕ ಕಚ್ಚಿ (ಐಜೆಕೆ) ನಾಯಕರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಪರಿವೇಂದರ್ ಡಿಎಂಕೆ ಚಿಹ್ನೆಯ ಮೇಲೆ ಸ್ಪರ್ಧಿಸಿ ಕ್ಷೇತ್ರದಲ್ಲಿ ಗೆದ್ದಿದ್ದರು.