-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಳೆದ 50ವರ್ಷಗಳಿಂದ ಒಂದು ಹನಿ ನೀರು ಸೇವಿಸದೆ ಬರೀ ಕೋಕಾ ಕೋಲಾ ಜೀವಿಸಿದ್ದಾನೆ ಈ ವ್ಯಕ್ತಿ

ಕಳೆದ 50ವರ್ಷಗಳಿಂದ ಒಂದು ಹನಿ ನೀರು ಸೇವಿಸದೆ ಬರೀ ಕೋಕಾ ಕೋಲಾ ಜೀವಿಸಿದ್ದಾನೆ ಈ ವ್ಯಕ್ತಿ



ಬ್ರೆಜಿಲ್: ಏನೂ ತಿನ್ನದೆ ನೀರು ಕುಡಿದು ಒಂದಷ್ಟು ದಿನಗಳ ಕಾಲ ಬದುಕಬಹುದು. ಅದನ್ನೂ ಮೀರಿ ಪ್ರಯತ್ನಿಸಿದರೆ ಕೆಲವು ತಿಂಗಳು ಕಾಲ ಜೀವಿಸಬಹುದು. ಆದರೆ, ನೀರು ಕುಡಿಯದೇ ಇದ್ದರೆ ಜೀವಂತವಾಗಿರೋದು ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಕಾಡುವುದು ನಿಜವೇ ಸರಿ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ವ್ಯಕ್ತಿ ಕಳೆದ 50 ವರ್ಷಗಳಿಂದ ಒಂದು ಹನಿ ನೀರು ಸೇವಿಸದೆ, ಕೇವಲ ಕೋಕಾ- ಕೋಲಾ ಕುಡಿದು ಬದುಕಿದ್ದಾನೆ ಎಂದರೆ ಆಶ್ಚರ್ಯವೇ ಸರಿ. 

ಬ್ರೆಜಿಲ್‌ನ ಬಹಿಯಾದಿಂದ ರಾಬರ್ಟ್ ಪೆಡೇರಾ ಎಂಬ ವ್ಯಕ್ತಿ ಕಳೆದ 50 ವರ್ಷಗಳಿಂದ ಕೇವಲ ಕೋಕಾ- ಕೋಲಾ ಕುಡಿದೇ ಬದುಕಿದ್ದಾರೆ. ಕೋಕ್‌ಗೆ ಬಿಗ್ ಫ್ಯಾನ್ ಆಗಿರುವ 70 ವರ್ಷದ ರಾಬರ್ಟ್, ಮಧುಮೇಹ ಮತ್ತು ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅವರು ಅದನ್ನು ಲೆಕ್ಕಿಸದೆ ಕೋಕಾ-ಕೋಲಾವನ್ನೇ ಸೇವಿಸಲು ಬಯಸುತ್ತಾರೆ. ಇದಲ್ಲದೆ, ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೂ ಕೂಡ ಕೋಕಾ ಕೋಲಾ ಕುಡಿಯುವ ಪ್ರೇಮ ಸ್ವಲ್ಪವೂ ಕಡಿಮೆಯಾಗಿಲ್ಲ.

ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಇವರಿಗೆ ಮಾತ್ರೆ, ಔಷಧಿ ತೆಗೆದುಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ. ಇವರು ಮಾತ್ರ ಕೋಕ್ ಮೇಲಿನ ಉತ್ಸಾಹ ಬಿಡದೆ ವೈದ್ಯರಿಗೆ ಒಂದು ಮನವಿ ಇಟ್ಟಿದ್ದು, ನೀವು ಹೇಳಿದಂತೆ ಮಾತ್ರ ತೆಗೆದುಕೊಡ್ತೀನಿ. ಆದರೆ, ಒಂದು ಷರತ್ತು. ನೀರಿನಿಂದ ಅಲ್ಲ ಬದಲಿಗೆ ಕೋಕ್ ಕುಡಿಯುತ್ತ ಮಾತ್ರ ತಗೋತಿನಿ ಅಂತಾರೆ. ಇದು ವೈದ್ಯರಿಗೂ ತಲೆಬಿಸಿ ತಂದಿಡುವಂತ ಪರಿಸ್ಥಿತಿ.

ರಾಬರ್ಟ್‌ನ ಕೋಕ್‌ ಸೇವನೆಯ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಜನರು ತೀವ್ರ ಅಚ್ಚರಿಗೆ ಒಳಗಾಗಿದ್ದು, ಮೊದಲಿಗೆ ಇದನ್ನು ನಂಬದಿದ್ದರೂ ತದನಂತರ ಇರಬಹುದೇನೋ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ರಾಬರ್ಟ್ ಕಥೆಯು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಸುತ್ತುವರೆಯುತ್ತಿದ್ದಂತೆ ಅನೇಕರು ಇವರ ಬಗ್ಗೆ ತಿಳಿಯಲು ಭಾರೀ ಕುತೂಹಲ ವ್ಯಕ್ತಪಡಿಸುತ್ತಾರೆ.

Ads on article

Advertise in articles 1

advertising articles 2

Advertise under the article

ಸುರ