-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸದ್ಯದಲ್ಲೇ ದೈವಾರಾಧನೆಯ ಮಹತ್ವ ಸಾರುವ ಅಂಚೆ ಚೀಟಿ

ಸದ್ಯದಲ್ಲೇ ದೈವಾರಾಧನೆಯ ಮಹತ್ವ ಸಾರುವ ಅಂಚೆ ಚೀಟಿ

ಮಂಗಳೂರು: ಭಾರತೀಯ ಅಂಚೆ ಇಲಾಖೆ ಹೊರತಂದಿರುವ ಯಕ್ಷಗಾನದ ಅಂಚೆ ಚೀಟಿಯು ಕರಾವಳಿಯ ಸಾಂಪ್ರದಾಯಿಕ ಕಲೆ ಯಕ್ಷಗಾನವನ್ನು ವಿಶ್ವದಾ ದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅಂಚೆ ಇಲಾಖೆಯು ಎಂಆರ್‌ಪಿಎಲ್ ಪ್ರಾಯೋಜಕತ್ವದಲ್ಲಿ ಹೊರತಂದಿರುವ "ಯಕ್ಷಗಾನ'ಕ್ಕೆ ಸಮರ್ಪಿತ ಸಂಸ್ಮರಣ ಅಂಚೆ ಚೀಟಿ ಯನ್ನು ರವಿವಾರ ಮಂಗಳೂರು ಪುರಭವನ ದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಕಡಲತಡಿಯ ಭಾರ್ಗವ ಶಿವರಾಮ ಕಾರಂತ ಹಾಗೂ ದೈವಾರಾಧನೆಯ ಮಹತ್ವವನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಈ ಕುರಿತಂತೆಯೂ ಅಂಚೆ ಚೀಟಿಯನ್ನು ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.


ಶಾಸಕ ಡಿ. ವೇದವ್ಯಾಸ ಕಾಮತ್‌ಮಾತನಾಡಿ, ಅಂಚೆ ಚೀಟಿ ಮೂಲಕಯಕ್ಷಗಾನವನ್ನು ವಿಶ್ವಕ್ಕೆ ಪರಿಚಯ ವಾಗುತ್ತಿರುವುದು ಸೌಭಾಗ್ಯ ಎಂದರು.ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಮಾತನಾಡಿ, ಅಂಚೆ ಚೀಟಿ ರಾಯಭಾರದ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನಕ್ಕೆ ಯುನೆಸ್ಕೋ ಸ್ಥಾನಮಾನ, ಐಸಿಸಿಆರ್ ಮುಖೇನ ಕಾರ್ಯಕ್ರಮಗಳು ಹಾಗೂ ಅಯೋಧ್ಯೆಯ ಪ್ರತಿಷ್ಠಾ ವಾರ್ಷಿ ಕೋತ್ಸವದ ದಿನ ಸಮಗ್ರ ರಾಮಾಯಣ ಕುರಿತು 1 ವಾರ ಯಕ್ಷಗಾನಕ್ಕೆ ಅವಕಾಶ ಸಿಗಲಿ ಎಂದು ಆಶಿಸಿದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕಾಮಾರ್, ಮೇಯರ್ ಸುಧೀ‌ರ್ ಶೆಟ್ಟಿ ಕಣ್ಣೂರು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಎಂಆರ್‌ಪಿಎಲ್‌ನ ಜಿಎಂ ಡಾ। ರುಡಾಲ್ಫ್ ನೊರೋನ್ಹಾ ಮುಖ್ಯ ಅತಿಥಿಗಳಾಗಿದ್ದರು.ದಕ್ಷಿಣ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ. ದಾಸ್ ಪ್ರಸಾವನೆಗೈದರು. ಸುಧಾಕರ ಮಲ್ಯ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article

ಸುರ