-->

ಎಂಟು ವರ್ಷಗಳ ಬಳಿಕ ಮೊತ್ತಮೊದಲ ಬಾರಿಗೆ ಬುರ್ಖಾವಿಲ್ಲದ ಫೋಟೊ ಕ್ಲಿಕ್ಕಿಸಿಕೊಂಡ ಕ್ರಿಕೆಟಿಗ ಇರ್ಫಾನ್ ಪತ್ನಿ

ಎಂಟು ವರ್ಷಗಳ ಬಳಿಕ ಮೊತ್ತಮೊದಲ ಬಾರಿಗೆ ಬುರ್ಖಾವಿಲ್ಲದ ಫೋಟೊ ಕ್ಲಿಕ್ಕಿಸಿಕೊಂಡ ಕ್ರಿಕೆಟಿಗ ಇರ್ಫಾನ್ ಪತ್ನಿ


ಮುಂಬೈ: ಮೊನ್ನೆ ಮೊನ್ನೆಯಷ್ಟೇ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ 8ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಸಫಾ ಬೇಗ್ ರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಇದೇ ಮೊದಲ ಬಾರಿಗೆ ಫರ್ದಾ ತೆಗೆದು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.

ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಇದುವರೆಗೆ ತಮ್ಮ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಅವರು ಪ್ರತಿ ಫೋಟೊದಲ್ಲೂ ಬುರ್ಖಾ ಧರಿಸಿಕೊಂಡೇ ಇರುತ್ತಿದದರು ಇದೀಗ ಮೊತ್ತಮೊದಲ ಬಾರಿಗೆ ಪತಿಯೊಂದಿಗೆ ಬುರ್ಖಾ ಹಾಗೂ ಫರ್ದಾ ರಹಿತ ಫೋಟೊದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಅವರು ತಮ್ಮ ಪತ್ನಿಯೊಂದಿಗಿನ ಸುಂದರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜೊತೆಗೆ ಪ್ರೀತಿಯ ಬರಹ ಬರೆದಿದ್ದಾರೆ. ಮನಸ್ಸು ಉಲ್ಲಾಸ ಮಾಡುವವರು, ಹಾಸ್ಯ ಮಾತಿನವರು, ತೊಂದರ ನೀಡುವವರು ಮತ್ತು ನನ್ನ ಮಕ್ಕಳ ನಿರಂತರ ಒಡನಾಡಿ, ನನ್ನ ಸ್ನೇಹಿತೆ ಮತ್ತು ಆತ್ಮ. ಈ ಸುಂದರ ಪ್ರಯಾಣದಲ್ಲಿ, ನನ್ನ ಹೆಂಡತಿಯಾಗಿ ಅಪಾರವಾಗಿ ಪ್ರೀತಿಸುತ್ತೇನೆ. ಎಂದು ಪಠಾಣ್ ತಮ್ಮ ಪತ್ನಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ಪಠಾಣ್ ಈ ಹಿಂದೆ ತನ್ನ ಪತ್ನಿಯೊಂದಿಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೇಳೆ ಅವರ ಮುಖವನ್ನು ಮರೆಮಾಚಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.

ಇರ್ಫಾನ್ 2016 ರಲ್ಲಿ ಸಫಾ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಇಮ್ರಾನ್ ಮತ್ತು ಸುಲೈಮಾನ್ ಎಂಬ ಇಬ್ಬರು ಪುತ್ರರಿದ್ದಾರೆ. ಪಾಕಿಸ್ತಾನ ವಿರುದ್ಧದ 2007ರ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ವೀರೋಚಿತ ಪ್ರದರ್ಶನ ನೀಡಿದ ಆಲ್‌ರೌಂಡರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ, ಪಠಾಣ್ ಟಿವಿ ವಿಶ್ಲೇಷಕ ಕರ್ತವ್ಯಗಳನ್ನು ಮಾಡುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article