ಪ್ರೀತಿಸಿ ವಿವಾಹವಾದ ಸೊಸೆಯನ್ನು ಮನೆ ತುಂಬಿಸಲು ವರದಕ್ಷಿಣೆ ಬೇಡಿಕೆ : ಹಣದೊಂದಿಗೆ ಬಂದ ಸೊಸೆ, ಆಕೆಯ ತಂದೆ, ಸಹೋದರನ ಗುಂಡಿಕ್ಕಿ ಕೊಂದ ಮಾವ

ಬಿಹಾರ: ಪ್ರೇಮ ವಿವಾಹವಾದ ಯುವತಿ ಪತಿ ಮನೆಗೆ ವರದಕ್ಷಿಣೆ ಹಣದೊಂದಿಗೆ ಹೋದಾಗ ಯುವತಿ ಸೇರಿದಂತೆ ಆಕೆಯ ತಂದೆ, ಸಹೋದರನನ್ನು ಆಕೆಯ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಶ್ರೀನಗರ ನಿವಾಸಿಗಳಾದ ಉಮೇಶ್ ಯಾದವ್(60), ರಾಜೇಶ್ ಯಾದವ್(25) ಮತ್ತು ನೀಲು ಕುಮಾರಿ(21) ಮೃತಪಟ್ಟ ದುರ್ದೈವಿಗಳು.

ನೀಲು ಕುಮಾರಿ ಹಾಗೂ ಗುಂಡಿಕ್ಕಿ ಹತ್ಯೆ ಮಾಡಿದಾತನ ಪುತ್ರ ಪರಸ್ಪರ ಪ್ರೀತಿಸುತ್ತಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಇವರಿಬ್ಬರು ಸಂಬಂಧಿಕರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಇಬ್ಬರ ಕುಟುಂಬದವರ ಒಪ್ಪಿಗೆ ಮೇರೆಗೆ ದೇವಸ್ಥಾನದಲ್ಲಿ ಮದುವೆ ಮಾಡಲಾಗಿತ್ತು. ಆದರೆ ಆ ಬಳಿಕ ಯುವಕನ ಕುಟುಂಬಸ್ಥರು ಯುವತಿಯನ್ನು ಮನೆ ತುಂಬಿಸಿಕೊಳ್ಳಲು ನಿರಾಕರಿಸಿದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ವಿವಾದ ಮೂವದ ಹತ್ಯೆಯೊಂದಿಗೆ ಕೊನೆಗೊಂಡಿದೆ.

ನೀಲು ಕುಮಾರಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪದ ಆಕೆಯ ಪತಿಯ ಕುಟುಂಬಸ್ಥರು 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಡ ಹೇರಿದ್ದರು. ಅದರಂತೆ 15 ಲಕ್ಷ ರೂಪಾಯಿ ಹೊಂದಿಸಿ ನೀಲು ಕುಮಾರಿಯನ್ನು ಮನೆ ತುಂಬಿಸಿಕೊಳ್ಳುವಂತೆ ಮನವಿ ಮಾಡಲು ಹಣದ ಸಮೇತ ತಂದೆ, ಇನ್ನೊಬ್ಬ ಸಹೋದರ ತೆರಳಿದ್ದರು. ಈ ವೇಳೆ ಮೂವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥ ಬಿಪಿನ್ ಯಾದವ್ ಆರೋಪಿಸಿದ್ದಾರೆ.

ಸಹೋದರಿಗೆ ತನ್ನ ಪತಿಯೊಂದಿಗೆ ಬಾಳಬೇಕೆಂಬ ಆಸೆಯಿತ್ತು. ಆದ್ರೆ ಅದು ಈಡೇರಲಿಲ್ಲ. ಈ ಕೊಲೆ ಪ್ರಕರಣದಲ್ಲಿ ನಮ್ಮ ಸಹೋದರಿಯ ಮಾವ ಮತ್ತು ಆಕೆಯ ಪತಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ.

ಘಟನೆ ಬೆಳಕಿಗೆ ಬಂದ ತಕ್ಷಣ ಬೇಗುಸರಾಯ್ ಎಸ್ಪಿ ಮನೀಶ್, ಡಿಎಸ್ಪಿ ಬಿನಯ್ ಕುಮಾರ್ ರೈ, ಠಾಣಾ ಪ್ರಭಾರಿ ದೀಪಕ್ ಕುಮಾ‌ರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್‌ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳನ್ನು ಬಂಧಿಸಿದ್ದಾರೆ.