-->

ಮಂಗಳೂರು: ಹನುಮಧ್ವಜ ಹಾರಾಟಕ್ಕೆ ಅವಕಾಶ ಕೊಡದಿದ್ದಲ್ಲಿ 'ಕೆರೆಗೋಡು ಚಲೋ' ಎಚ್ಚರಿಕೆ ನೀಡಿದ ಶರಣ್ ಪಂಪ್ ವೆಲ್

ಮಂಗಳೂರು: ಹನುಮಧ್ವಜ ಹಾರಾಟಕ್ಕೆ ಅವಕಾಶ ಕೊಡದಿದ್ದಲ್ಲಿ 'ಕೆರೆಗೋಡು ಚಲೋ' ಎಚ್ಚರಿಕೆ ನೀಡಿದ ಶರಣ್ ಪಂಪ್ ವೆಲ್


ಮಂಗಳೂರು: ಮಂಡ್ಯದ ಕೆರೆಗೋಡಿನಲ್ಲಿ ಹನುಮಧ್ವಜ ತೆರವು ಮಾಡಿರುವ ಕೃತ್ಯವನ್ನು ಖಂಡಿಸಿ ಮಂಗಳೂರಿನ ವಿಧಾನಸೌಧದ ಮುಂಭಾಗ ವಿಎಚ್ ಪಿ ಬಜರಂಗದಳ ಹನುಮಾನ್ ಚಾಲೀಸಾ ಪಠಣ ಮಾಡಿ ಧರಣಿ ನಡೆಯಿತು.

50-60ರಷ್ಟು ಮಂದಿ ಹಿಂದೂ ಕಾರ್ಯಕರ್ತರು ಭಾಗಿಯಾಗಿ ಹನುಮಾನ್ ಚಾಲೀಸ್ ಪಠಣದಲ್ಲಿ ಭಾಗಿಯಾದರು. ಈ ವೇಳೆ ಎರಡು ಬಾರಿ ಹನುಮಾನ್ ಚಾಲೀಸ ಪಠಣ ನಡೆಯಿತು.

ವಿಎಚ್ ಪಿ ಮುಖಂಡರಾದ ಶರಣ್ ಪಂಪ್ ವೆಲ್, ಎಚ್.ಕೆ.ಪುರುಷೋತ್ತಮ, ಶಿವಾನಂದ ಮೆಂಡನ್ ಮತ್ತಿತರರ ಹಿಂದೂ ಕಾರ್ಯಕರ್ತರು ಹನುಮಧ್ವಜ ಹಿಡಿದು ಪ್ರತಿಭಟನೆ ನಡೆಸಿದರು.

 ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಹೊರತುಪಡಿಸಿ 362 ದಿನಗಳ ಕಾಲ ಕೆರೆಗೋಡಿನಲ್ಲಿ ಹನುಮಧ್ವಜ ಹಾರಾಟಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದಲ್ಲಿ ವಿಎಚ್ ಪಿ ಬಜರಂಗದಳದಿಂದ ಕೆರೆಗೋಡು ಚಲೋ ನಡೆಸಲಿದ್ದೇವೆ. ಇಡೀ ರಾಜ್ಯದ ಎಲ್ಲಾ ಬಜರಂಗದಳದ ಕಾರ್ಯಕರ್ತರು ಕೆರೆಗೋಡಿಗೆ ಬಂದು ನಾವೇ ಹನುಮಾನ್ ಧ್ವಜ ಹಾರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ಕೇಳಿ ಬಂತು.



Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article