ಲಂಡನ್ ಫ್ಯಾಶನ್ ವೀಕ್ ನಲ್ಲಿ ಕರಾವಳಿಯ ಸುಂದರಿ!


 


ಲಂಡನ್ ಫ್ಯಾಶನ್ ವೀಕ್ ನಲ್ಲಿ ಕಾರ್ಕಳದ ನಿಟ್ಟೆಯ ಬೆಡಗಿ ಶ್ರೀಮಾ ರೈ ಅವರು ಮೌಕ್ತಿಕ ಕಲೆಕ್ಷನ್ ಬ್ರಾಂಡ್ ನ ಚೊಚ್ಚಲದ ರೂಪದರ್ಶಿಯಾಗಿ ಮಿಂಚಿದ್ದಾರೆ. 


ಮಾಜಿ ಬ್ಯಾಂಕರ್, ಮಿಸೆಸ್ ಇಂಡಿಯಾ ಗ್ಲೋಬ್ (ಮಿಸೆಸ್ ಇಂಡಿಯಾ ಗ್ಲೋಬ್), ಡಿಜಿಟಲ್ ಕಾಂಟೆಂಟ್ ಕ್ರಿಯೇಟರ್ (ಡಿಜಿಟಲ್ ಕಂಟೆಂಟ್ ಕ್ರಿಯೇಟರ್), ಸಾಮಾಜಿಕ ಜಾಲದ ಮೂಲಕ ಖ್ಯಾತಿ ಪಡೆದ ಶ್ರೀಮಾ ರೈ ಅವರು ಎರಡು ಮಕ್ಕಳ ತಾಯಿಯಾಗಿದ್ದಾರೆ. 

ನಿಟ್ಟೆಗುತ್ತು ವಿಶಾಲಿ ಹಾಗೂ ಬೆಳ್ಳಿಪ್ಪಾಡಿ ನೇಮಿರಾಜ್ ರೈಯವರ ಮಗಳಾಗಿರುವ ಶ್ರೀಮಾ ಆದಿತ್ಯ ರೈ ಅವರು ತನ್ನ ದಿಟ್ಟತನ, ಸೌಂದರ್ಯ, ಫ್ಯಾಶನ್ ಹಾಗೂ ತಾಯ್ತನದ ಮೂಲಕ ಜಗತ್ತಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.