-->
ಭೀಕರ ರಸ್ತೆ ಅಪಘಾತದಲ್ಲಿ ಬಿಆರ್‌ಎಸ್ ಪಕ್ಷದ ಶಾಸಕಿ ಜಿ.ಲಾಸ್ಯ ನಂದಿತಾ ಸ್ಥಳದಲ್ಲಿಯೇ ಸಾವು

ಭೀಕರ ರಸ್ತೆ ಅಪಘಾತದಲ್ಲಿ ಬಿಆರ್‌ಎಸ್ ಪಕ್ಷದ ಶಾಸಕಿ ಜಿ.ಲಾಸ್ಯ ನಂದಿತಾ ಸ್ಥಳದಲ್ಲಿಯೇ ಸಾವು


ಹೈದರಾಬಾದ್: ತೆಲಂಗಾಣ ರಾಜ್ಯದ ಸಿಕಂದರಾಬಾದ್ ಕಂಟೋನ್ಮಂಟ್ ವಿಧಾನಸಭಾ ಕ್ಷೇತ್ರದ ಯುವ ಶಾಸಕಿ ಜಿ.ಲಾಸ್ಯ ನಂದಿತಾ(37) ಶುಕ್ರವಾರ ಬೆಳಗ್ಗೆ ಹೈದರಾಬಾದ್ ಬಳಿ ನಡೆದ ಭೀಕರ ಕಾರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಹೈದರಾಬಾದ್ ಪತಂಚೇರು ಬಳಿಯ ಹೊರ ವರ್ತುಲ ರಸ್ತೆಯಲ್ಲಿ ಲಾಸ್ಯ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್ ತಡೆಗೋಡೆಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಶಾಸಕಿ ಲಾಸ್ಯ ನಂದಿತಾ ಪ್ರಯಾಣಿಸುತ್ತಿದ್ದ ಎಸ್‌ಯುವಿ ವಾಹನ ನಿಯಂತ್ರಣ ಕಳೆದುಕೊಂಡು ಔಟರ್ ರಿಂಗ್ ರಸ್ತೆಯ ಎಡಭಾಗದ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿದೆ. ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿ ಲಾಸ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಗಾಯಗೊಂಡಿದ್ದಾರೆ.

ಇತ್ತೀಚೆಗಷ್ಟೇ ಲಾಸ್ಯ ನಂದಿತಾ ಅವರು ಬಿಆರ್‌ಎಸ್ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲು ನಲ್ಗೊಂಡಾಕ್ಕೆ ತೆರಳುತ್ತಿದ್ದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಪವಾಡ ಸದೃಶವಾಗಿ ಪಾರಾಗಿದ್ದರು. ನಲ್ಗೊಂಡ ಜಿಲ್ಲೆಯ ನಾರ್ಕೆಟ್‌ಪಲ್ಲಿಯಲ್ಲಿ ಫೆ.13ರಂದು ನಡೆದ ಘಟನೆಯಲ್ಲಿ ಗೃಹರಕ್ಷಕ ಜಿ ಕಿಶೋರ್ ಅವರಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಕಳೆದ ನವೆಂಬ‌ರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಓವರ್‌ಲೋಡ್ ಆಗಿದ್ದ ಲಿಫ್ಟ್ ನೆಲಮಾಳಿಗೆಗೆ ಬಿದ್ದ ಘಟನೆಯಲ್ಲಿಯೂ ಅವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

ಶಾಸಕಿ ನಂದಿತಾ ಕಂಟೋನ್ಸೆಂಟ್‌ನಿಂದ ಅವರು ಐದು ಬಾರಿ ಸಿಕಂದರಾಬಾದ್ ಬಿಆರ್‌ಎಸ್ ಶಾಸಕರಾಗಿದ್ದ ಜಿ ಸಾಯಣ್ಣ ಅವರ ಪುತ್ರಿ. ಕಳೆದ ವರ್ಷ ಫೆಬ್ರವರಿ 19 ರಂದು ತಮ್ಮ 72ನೇ ವಯಸ್ಸಿನಲ್ಲಿ ಸಾಯಣ್ಣ ನಿಧನರಾಗಿದ್ದರು. ಸಾಯಣ್ಣ ಮೃತಪಟ್ಟ ಬಳಿಕ ಸಿಕಂದರಾಬಾದ್ ಕಂಟೋನ್ಮಂಟ್ ವಿಧಾನಸಭಾ ಕ್ಷೇತ್ರದಿಂದ ಲಾಸ್ಯಾರನ್ನು ಕಣಕ್ಕಿಳಿಸಲಾಗಿತ್ತು.

Ads on article

Advertise in articles 1

advertising articles 2

Advertise under the article