Subramanya- ಅಸೌಖ್ಯದಿಂದ 20 ವರ್ಷದಿಂದ ವಿದ್ಯಾರ್ಥಿನಿ ನಿಧನ


ಸುಬ್ರಹ್ಮಣ್ಯ : ಅಸೌಖ್ಯದಿಂದ ಪದವಿ ಕಾಲೇಜು ವಿದ್ಯಾರ್ಥಿನಿಯೋರ್ವರು ಮೃತಪಟ್ಟ ಘಟನೆ ಜ.11ರ ರಾತ್ರಿ ನಡೆದಿದೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ಗಂಡಿತಡ್ಕ ನಿವಾಸಿ ರಾಮಚಂದ್ರ ನಾಯ್ಕ ಅವರ ಪುತ್ರಿ ತೃಪ್ತಿ (20) ಮೃತರು. ಅವರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿಯಾಗಿದ್ದ ತೃಪ್ತಿ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಪುತ್ತೂರು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ನಿಧನ ಹೊಂದಿದರು.