ಪುತ್ತೂರು: ಎಫ್ ಬಿಯಲ್ಲಿ ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಚ್ಲಂಪಾಡಿ ನಿವಾಸಿ ಪುರುಷೋತ್ತಮ ಓ ದವಳಗಿರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ ಓ ದವಳಗಿರಿ ಎಂಬಾತ ಕ್ರಿಶ್ಚಿಯನ್ ಧರ್ಮದ ಬಗ್ಗೆ ತನ್ನ ಎಫ್ ಬಿ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟೊದ್ದಾನೆ. ಈ ಮೂಲಕ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕೆಡಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಇಚ್ಲಂಪಾಡಿ ಬರಮಾರು ಕೈಪನಡ್ಕ ನಿವಾಸಿ ಮೇಹಿಜಾರ್ಜ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈತ ತನ್ನ ಎಫ್ ಬಿ ಖಾತೆಯಲ್ಲಿ "ಕಡಬ ತಾಲೂಕಿನ ಕೆಲವು ಮಲೆಯಾಳಿ ಹಿಂದೂಗಳಿಗೆ ಏನು ತಲೆ ಕೆಟ್ಟಿದೆಯೋ.. ಸರಿಯಾಗಿ ದುಡಿಯದೇ ಹಣಕ್ಕಾಗಿ ಪಾದ್ರಿಯ ತಿಕ ಮೂಸುತ್ತಿದ್ದಾರೆ" ಎಂದು ಪೋಸ್ಟ್ ಹಾಕಿದ್ದಾನೆ. ಈ ಪೋಸ್ಟ್ ವೈರಲ್ ಆಗಿದ್ದು ಕ್ರಿಶ್ಚಿಯನ್ನರ ಗ್ರೂಪಿನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.