ಮಾಜಿ ಮಾಡೆಲ್ ದಿವ್ಯಾ ಪಹೂಜಾ ಭೀಕರ ಹತ್ಯೆ




ಗುರುಗ್ರಾಮ: ಹತ ಗ್ಯಾಂಗ್‌ಸ್ಟರ್‌ ಸಂದೀಪ್ ಗಡೋಲಿಯ ಮಾಜಿ ಪ್ರೇಯಸಿ ಹಾಗೂ ಮಾಜಿ ರೂಪದರ್ಶಿ ದಿವ್ಯಾ ಪಹೂಜಾಳನ್ನು ಗಡೋಲಿಯ ಆಪ್ತನಾಗಿದ್ದ ಎನ್ನಲಾದ ಅಭಿ ಜೀತ್ ಸಿಂಗ್ ಹಾಗೂ ಆತನ ಇಬ್ಬರು ಸಹಚರರು ಹತ್ಯೆ ಮಾಡಿರುವ ಘಟನೆ ಇಲ್ಲಿ ನಡೆದಿದೆ.


ಇತ್ತೀಚಿನ ದಿನದಿಂದ ದಿವ್ಯಾ ನಾಪತ್ತೆ ಆಗಿದ್ದಳು. ಆದರೆ ಆಕೆಯ ಮೊಬೈಲ್ ಸಂಕೇತ ಅಭಿಜೀತ್ ಒಡೆತನದ ಹೋಟೆಲ್‌ನಲ್ಲಿ ಪತ್ತೆಯಾಗಿತ್ತು. ಇದರ ಜಾಡು ಹಿಡಿದು ಪೊಲೀಸರು ಅಭಿಜೀತ್‌ನ ಹೋಟೆಲ್‌ಗೆ ಹೋದಾಗ ಆಕೆಯ ಶವವನ್ನು ಅಭಿಜೀತ್‌ ಹಾಗೂ ಇಬ್ಬರು ಸಹಚರರು ಚೀಲದಲ್ಲಿ ಎಳೆದೊಯ್ದು ಕಾರಿನಲ್ಲಿ ಸಾಗಿಸಿದ್ದು ಕಂಡು ಬಂದಿದೆ. 


ಶವವನ್ನು ಎಲ್ಲೋ ಬಿಸಾಕಿದ್ದು, ಅದಕ್ಕಾಗಿ ಶೋಧ ನಡೆದಿದೆ. ಅಭಿಜೀತ್ ಸೇರಿ ಮೂವರನ್ನು ಬಂಧಿಸ ಲಾಗಿದೆ. ಗಡೋಲಿ 2016ರಲ್ಲಿ ಹತ್ಯೆಯಾಗಿದ್ದ. ಆತನದ್ದು ನಕಲಿ ಎನ್‌ಕೌಂಟ‌ರ್ ಎನ್ನಲಾಗಿತ್ತು. ಈ ಕೇಸಿನಲ್ಲಿ ದಿವ್ಯಾ ಮುಖ್ಯ ಆರೋಪಿ ಆಗಿದ್ದು, 7 ವರ್ಷ ಜೈಲಲ್ಲಿದ್ದು ಕಳೆದ ವರ್ಷ ಜಾಮೀನಿನ ಮೇಲೆ ಹೊರಬಂದಿದ್ದಳು. ಸಂದೀಪ್ ಹತ್ಯೆಯ ಸೇಡಿಗಾಗಿ ಆತನ ಆಪ್ತ ಅಭಿಜೀತ್, ದಿವ್ಯಾಳ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.