ಒಂದೂವರೆ ತಿಂಗಳ ಹಿಂದೆ ವಿವಾಹವಾಗಿದ್ದನವವಿವಾಹಿತೆಯ ಶವ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಒಂದೂವರೆ ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

 ಕೊಟ್ಟಿ ಕುಳಂ ಕೋಡಿ ರಸ್ತೆಯ ನಿವಾಸಿ, ಆಟೋ ರಿಕ್ಷಾ ಚಾಲಕ ಮೊಹಮ್ಮದ್ ಮತ್ತು ಜುಬೈದಾ ದಂಪತಿಯ ಪುತ್ರಿ ತಪ್ಪಿನಾ (27) ಮೃತಪಟ್ಟ ಮಹಿಳೆ. 

ಬುಧವಾರ ಸಂಜೆ ಕಾಪ್ಟಿಲ್‌ ನದಿಯಲ್ಲಿ ಯುವತಿ ಬಿದ್ದಿರುವುದನ್ನು 'ಸ್ಥಳೀಯ ನಿವಾಸಿಗಳು ಕಂಡು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.

ಮೃತ ಮಹಿಳೆ ಒಂದೂವರೆ ತಿಂಗಳ ಹಿಂದೆ ಮೌವ್ವಲ್‌ನ ಸಮೀ‌ರ್ ಎಂಬಾತನನ್ನು ವಿವಾಹವಾಗಿದ್ದರು. ಅವರಿಗೆ ತಂದೆ, ತಾಯಿ, ಪತಿ, ಸಹೋದರ ಸಹೋದರಿ ಇದ್ದಾರೆ.