ಕಾಂಗ್ರೆಸ್ ತೊರೆದು ಮತ್ತೆ BJP ಸೇರಿದ ಜಗದೀಶ್ ಶೆಟ್ಟರ್



ಹೊಸದಿಲ್ಲಿ: ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟ‌ರ್ ಮತ್ತೆ ಬಿಜೆಪಿ ಸೇರಿದ್ದಾರೆ.


ಇಂದು ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಶೆಟ್ಟ‌ರ್, ಬಿಜೆಪಿ ಸೇರ್ಪಡೆಯಾಗುವುದಕ್ಕೆ ಒಪ್ಪಿದ್ದಾರೆ.


ನಂತರ ದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಜಗದೀಶ್ ಶೆಟ್ಟ‌ರ್ ಬಿಜೆಪಿಗೆ ಸೇರಿದ್ದಾರೆ.