-->
1000938341
ಪ್ರೀತಿಸುವ ನಾಟಕ- 16 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ

ಪ್ರೀತಿಸುವ ನಾಟಕ- 16 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರವಿಶಾಖಪಟ್ಟಣಂ: ಪ್ರೀತಿಸುವ ನಾಟಕವಾಡಿ ಬಾಲಕಿ ಮೇಲೆ ಹತ್ತು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ.


16 ವರ್ಷದ ಬಾಲಕಿ ಒಡಿಶಾದಿಂದ ಮನೆಗೆಲಸಕ್ಕೆಂದು ವಿಶಾಖಪಟ್ಟಣಗೆ ಬಂದಿದ್ದಳು. ಇದೀಗ ಈಕೆ ಪ್ರೀತಿಯ ಹೆಸರಲ್ಲಿ ಪ್ರಿಯಕರನಿಂದಲೇ ವಂಚನೆಗೊಳಗಾಗಿದ್ದಾಳೆ. ಆರೋಪಿ ಹಾಗು ಇತರ ಎಂಟು ಮಂದಿ  ಬಾಲಕಿಯನ್ನು ಎರಡು ದಿನಗಳ ಕಾಲ ಲಾಡ್ಜ್‌ನಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ಈ ಬಗ್ಗೆ ಹೇಳಿಕೆ ನೀಡಿದ ಡಿಸಿಪಿ ಶ್ರೀನಿವಾಸ್​ "ಒಡಿಶಾದ ಕುಟುಂಬವೊಂದು ವಿಶಾಖಪಟ್ಟಣಂನಲ್ಲಿ ನೆಲೆಸಿದೆ. ಹುಡುಗಿಗೆ ರೈಲ್ವೇ ನ್ಯೂ ಕಾಲೊನಿಯ ಮನೆಯೊಂದರಲ್ಲಿ ಶ್ವಾನಗಳಿಗೆ ಆಹಾರ ನೀಡುವ ಕೆಲಸ ಸಿಕ್ಕಿತ್ತು. ಆಕೆ ಭುವನೇಶ್ವರದ ಯುವಕನನ್ನು ಭೇಟಿಯಾಗಿ ಪ್ರೀತಿಸುತ್ತಿದ್ದಳು. ಇದೇ ತಿಂಗಳ 18ರಂದು ನರ್ಗೋ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಟೇಲ್‌ಗೆ ಬಾಲಕಿಯನ್ನು ಕರೆದುಕೊಂಡು ಹೋದ ಪ್ರಿಯಕರ ಅತ್ಯಾಚಾರ ಎಸಗಿದ್ದಾನೆ. ಬಳಿಕ ತನ್ನ ಸ್ನೇಹಿತನನ್ನೂ ಸ್ಥಳಕ್ಕೆ ಕರೆಸಿದ್ದು, ಆತ ಕೂಡಾ ಅತ್ಯಾಚಾರ ಎಸಗಿದ್ದಾನೆ."


"ಇದರಿಂದ ತೀವ್ರವಾಗಿ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ನಗರದ ಆರ್‌.ಕೆ.ಬೀಚ್‌ಗೆ ತೆರಳಿ ಅಳುತ್ತಾ ಕುಳಿತುಕೊಂಡಿದ್ದಳು. ಪ್ರವಾಸಿಗರು ಚಿತ್ರಗಳನ್ನು ತೆಗೆಯುತ್ತಿದ್ದಾಗ ವ್ಯಕ್ತಿಯೊಬ್ಬ ಆಕೆಯನ್ನು ನೋಡಿ ಸಮಾಧಾನಪಡಿಸಿ ಸಮೀಪದ ಲಾಡ್ಜ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಬಂಧಿಸಿಟ್ಟಿದ್ದಾನೆ. ಬಳಿಕ ಆತ ಸೇರಿದಂತೆ ಮತ್ತೆ ಎಂಟು ಮಂದಿ ಸ್ನೇಹಿತರು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ."


"ಇದರಿಂದ ಮತ್ತಷ್ಟು ಆಘಾತಕ್ಕೀಡಾದ ಬಾಲಕಿ ಅವರ ವಶದಿಂದ ಹೇಗೋ ತಪ್ಪಿಸಿಕೊಂಡು ಒಡಿಶಾದ ಕಲಹಂಡಿ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ಮರಳಿದ್ದಾಳೆ. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ನಾಲ್ಕನೇ ಪಟ್ಟಣ ಠಾಣೆ ಪೊಲೀಸರು ಡಿಸೆಂಬರ್​ 18ರಂದು ಮನೆಯಿಂದ ಕಾಣೆಯಾಗಿದ್ದ ಯುವತಿಯನ್ನು ಡಿಸೆಂಬರ್​ 25ರಂದು ಪತ್ತೆ ಹಚ್ಚಿ ವಿಶಾಖಪಟ್ಟಣಂ ಮನೆಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ."


"ಆತಂಕ ಹಾಗೂ ಭಯದಿಂದ ಬಾಲಕಿ ತನಗಾದ ಅನ್ಯಾಯವನ್ನು ಪೋಷಕರೊಂದಿಗೆ ಭಾನುವಾರದವರೆಗೂ ಹಂಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಬಳಿಕ ಭಾನುವಾರ ಎಲ್ಲ ವಿಚಾರ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈವರೆಗೆ ನಗರದ 8 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ."


"ಗೆಳೆಯ ಮತ್ತು ಆತನ ಸ್ನೇಹಿತ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಜಾರ್ಖಂಡ್ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ಶೋಧ ಕೈಗೊಂಡಿದ್ದೇವೆ" ಎಂದು ಡಿಸಿಪಿ ಶ್ರೀನಿವಾಸ್​ ಹೇಳಿದ್ದಾರೆ

Ads on article

Advertise in articles 1

advertising articles 2

Advertise under the article