10 ವರ್ಷದ ಪುತ್ರಿಯೇ ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ?
Friday, January 5, 2024
ಸಿಯೋಲ್: ಭವಿಷ್ಯದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಉತ್ತರಾಧಿಕಾರಿಯಾಗಿ ಅವರ ಕಿರಿಯ ಮಗಳು ಜು ಏ ನೇಮಕವಾಗುವ ಸಾಧ್ಯತೆ ಇದೆ ಎಂದು ದಕ್ಷಿಣ ಕೊರಿಯಾ ಗುಪ್ತಚರ ಸಂಸ್ಥೆ ತಿಳಿಸಿದೆ.
ಕಿಮ್ ಜಾಂಗ್ ಉನ್ ಅವರ ಉತ್ತ ರಾಧಿಕಾರಿ ಕುರಿತು ಗುಪ್ತಚರ ಸಂಸ್ಥೆಯೊಂದು ಬಹಿರಂಗ ಹೇಳಿಕೆ ನೀಡಿರುವುದು ಇದೇ ಮೊದಲು. 2022ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಪ್ರಪಂಚಕ್ಕೆ ಜು ಏ ಅವರನ್ನು ಪರಿಚಯಿಸಲಾಯಿತು.
ಆಕೆ ತನ್ನ ತಂದೆಯೊಂದಿಗೆ ಕುಳಿತು ಕ್ಷಿಪಣಿ ಪರೀ ಕೈ ವೀಕ್ಷಿಸಿದ್ದಳು. ಅನಂತರ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಳು. ತಂದೆಯೇ ಆಕೆಗೆ ತರಬೇತಿ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.