-->
ಉಳ್ಳಾಲ: ವಾಹನ ಕಳವು ಆರೋಪಿ ಸೆರೆ - ಮೂರು ದ್ವಿಚಕ್ರ ವಾಹನಗಳು ವಶಕ್ಕೆ

ಉಳ್ಳಾಲ: ವಾಹನ ಕಳವು ಆರೋಪಿ ಸೆರೆ - ಮೂರು ದ್ವಿಚಕ್ರ ವಾಹನಗಳು ವಶಕ್ಕೆ


ಮಂಗಳೂರು: ವಾಹನ ಕಳವುಗೈದ ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿ ಆತನಿಂದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ಮ ಗ್ರಾಮದ ಕನಕೂರು ಸೈಟ್ ನಿವಾಸಿ ಹುಸೈನ್ ಜಾಹೀದ್ (24)ಬಂಧಿತ ಆರೋಪಿ.

ಹುಸೈನ್ ಜಾಹೀದ್ ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮದ ತಿಲಕನಗರ ಮತ್ತು ಬೆಳ್ಮ ಗ್ರಾಮದ ದೇರಳಕಟ್ಟೆಯ ಗ್ರೀನ್ ಗೌಂಡ್‌ನಲ್ಲಿ ಈ ಹಿಂದೆ ವಾಹನ ಕಳವುಗೈದಿದ್ದ. ಅ.22ರಂದು ಅಂಬ್ಲಮೊಗರು ಗ್ರಾಮದ ಐಸಮ್ಮರವರ‌ ಹೋಂಡಾ ಡೀಯೋ ಮತ್ತು ನ.16ರಂದು ದೇರಳಕಟ್ಟೆಯ ಗುಲಾಮ್ ಹುಸೇನ್ ಎಂಬವರ ಹೋಂಡಾ ಆಕ್ಟಿವಾ ವಾಹನ ಕಳವಾಗಿತ್ತು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಹುಸೈನ್ ಜಾಹೀದ್ ಎಂದು ತಿಳಿದು ಬಂದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಕಳವುಗೈದ ಎರಡು ಸ್ಕೂಟರ್‌ಗಳಲ್ಲದೆ ನಂಬರ್ ಪ್ಲೇಟ್ ಇಲ್ಲದ ಇನ್ನೊಂದು ಸ್ಕೂಟರ್ ಅನ್ನೂ ವಶಪಡಿಸಿಕೊಂಡಿದ್ದಾರೆ. ಈ ಮೂರು ವಾಹನಗಳ ಬೆಲೆ 68,000 ರೂ. ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣೆಯ ಪ್ರಭಾರ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಸ್ಪಿಗಳಾದ ನಾಗರಾಜ್ ಎಸ್, ಪುನೀತ್ ಗಾಂಡ್ಕರ್, ಅಶೋಕ್, ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆ.ಸಿ, ಸುರೇಶ್ ತಳವಾರ್ ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article