ಮುಂದಿನ ಜನ್ಮದಲ್ಲಿ ಮದುವೆಯಾದರೆ ನಿನ್ನನೆ ಆಗ್ತೇನೆ.. ವಿದ್ಯಾರ್ಥಿನಿಗೆ ಹೇಳಿದ ಶಿಕ್ಷಕ
Thursday, December 21, 2023
ತುಮಕೂರು: ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಶಿಕ್ಷಕನನ್ನು ಬಂಧಿಸಿರುವ ಘಟನೆ ತಾಲೂಕಿನ ನರಸಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದಿದೆ.
ಸಮಾಜಶಾಸ್ತ್ರ ಶಿಕ್ಷಕ ರವೀಂದ್ರ ಬಂಧಿತ ಆರೋಪಿ. ಮೊರಾರ್ಜಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೀರೆಯುಟ್ಟಿದ್ದ 6ನೇ ತರಗತಿ ವಿದ್ಯಾರ್ಥಿನಿಗೆ ನೀನು ಸೀರೆಯಲ್ಲಿ ಚೆನ್ನಾಗಿ ಕಾಣುತ್ತೀಯ. ಮುಂದಿನ ಜನ್ಮದಲ್ಲಿ ಮದುವೆಯಾದರೆ ನಿನ್ನನ್ನೇ ಆಗುತ್ತೇನೆ ಎಂದು ರವೀಂದ್ರ ಕಿರುಕುಳ ನೀಡಿದ್ದಾರೆ.
ಜತೆಗೆ ಆಗಸ್ಟ್‌ನಿಂದಲೇ ಪದೇಪದೆ ನಿಂದಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿ, ಬಳಿಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ಸಂಬಂಧ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.