ಲಂಚ ಕೊಟ್ಟು ಟಿಕೆಟ್ ಪಡೆಯುವ ಜಾಯಮಾನ ನನ್ನದಲ್ಲ: ಮೊಯಿಲಿ



ಚಿಕ್ಕಬಳ್ಳಾಪುರ : ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಲಂಚ ಕೊಟ್ಟು ಟಿಕೆಟ್ ಪಡೆಯುವ ಜಾಯ

ಮಾನ ನನ್ನದಲ್ಲ. ಸುದೀರ್ಘ 50 ವರ್ಷಗಳ ರಾಜಕಾರಣದಲ್ಲಿ ನಾನು ಎಂದೂ ವಾಮಮಾರ್ಗದಲ್ಲಿ ಪಕ್ಷದ ಟಿಕೆಟ್ ಪಡೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ  ಎಂ.ವೀರಪ್ಪ ಮೊಯಿಲಿ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿ ಎಂದು

ಕೇಳಿಲ್ಲ. ಕೇಳುವುದೂ ಇಲ್ಲ. ಕ್ಷೇತ್ರದ ಜನರ ಆಪೇಕ್ಷೆ ಪಕ್ಷದ ಕಾರ್ಯಕರ್ತರ, ಮುಖಂಡರ, ಪದಾಧಿಕಾರಿಗಳು ನನಗೆ ಟಿಕೆಟ್ ಕೊಡಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ. ಅದರಂತೆ ಪಕ್ಷದ

ಕೇಂದ್ರ ಸಮಿತಿ ನಿರ್ಧರಿಸಲಿದೆ ಎಂದರು.