-->
1000938341
ವಿಚ್ಛೇದನ ವದಂತಿ ಬೆನ್ನಲ್ಲೇ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿದ ಬಿಗ್ ಬಿ

ವಿಚ್ಛೇದನ ವದಂತಿ ಬೆನ್ನಲ್ಲೇ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿದ ಬಿಗ್ ಬಿಮುಂಬೈ: ಕಳೆದ ಹಲವು ದಿನಗಳಿಂ​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಕುಟುಂಬ ಗಾಸಿಪ್​ ನಿಂದ ಕೂಡಿದೆ. ಅಲ್ಲದೆ ಇದು ಚರ್ಚೆಯ ವಿಚಾರವಾಗಿ ಬದಲಾಗಿದೆ. ಐಶ್ವರ್ಯಾ ರೈ ಹಾಗೂ ಅಭಿಷೇಕ್​ ನಡುವೆ ಎಲ್ಲವೂ ಸರಿ ಇದ್ದಂತಿಲ್ಲ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಈ ಕುರಿತು ಬಚ್ಚನ್​ ಕುಟುಂಬದ ಸದಸ್ಯರು ಈವರೆಗೂ ಸ್ಪಷ್ಟನೆ ನೀಡಿಲ್ಲ.

ಕೆಲವು ದಿನಗಳ ಹಿಂದಿನ ಅಭಿಷೇಕ್​ ಬಚ್ಚನ್​ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅಭಿಷೇಕ್ ಬಚ್ಚನ್ ಅವರು ತಮ್ಮ ಮದುವೆ ರಿಂಗ್ ಧರಿಸಿರಲಿಲ್ಲ. ಅಲ್ಲದೆ, ಕೆಲ ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಐಶ್ವರ್ಯಾ ಕೂಡ ತಮ್ಮ ವೆಡ್ಡಿಂಗ್ ರಿಂಗ್ ಧರಿಸಿರಲಿಲ್ಲ. ಈ ಎರಡು ಘಟನೆಗಳು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಇದೀಗ ಅಮಿತಾಬ್​ ಬಚ್ಚನ್​ ತಮ್ಮ ಸೊಸೆ ಐಶ್ವರ್ಯ ರೈಯವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್​ಫಾಲೋ ಮಾಡಿದ್ದಾರೆ. ಇದು ಎದ್ದಿರುವ ಹಲವು ಅನುಮಾನಗಳಿಗೆ ಮತ್ತಷ್ಟು ಪುಷ್ಟಿಕೊಡುವಂತಿದೆ. ಇದರ ಬೆನ್ನಲ್ಲೇ ಪೋಸ್ಟ್​ ಒಂದನ್ನು ಶೇರ್​ ಮಾಡಿರುವ ಬಿಗ್​ ಬಿ ''ಎಲ್ಲವೂ ಹೇಳಿದೆ ಎಲ್ಲವನ್ನೂ ಮಾಡಿದೆ. ಮಾಡುವುದನ್ನೂ ಮಾಡಿಯಾಗಿದೆ" ಎಂದು ಬರೆದುಕೊಳ್ಳುವ ಮೂಲಕ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

ಶ್ವೇತಾ ನಂದ ಪುತ್ರ ಅಭಿನಯಿಸಿರುವ ‘ದಿ ಆರ್ಚೀಸ್‌’ ಫಸ್ಟ್ ಶೋಗೆ ಇಡೀ ಬಚ್ಚನ್ ಕುಟುಂಬವೇ ರೆಡ್ ಕಾರ್ಪೆಟ್ ಗೆ ಬಂದಿತ್ತು. ಈ ವೇಳೆ ಎಲ್ಲರ ಕಣ್ಣು ಐಶ್ವರ್ಯಾ ಹಾಗೂ ಅಭಿಷೇಕ್ ಮೇಲೆ ನೆಟ್ಟಿತ್ತು. ಎಂದಿನಂತೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ಇದ್ದ ಬಾಂಡಿಂಗ್ ಈ ಬಾರಿ ಕಾಣಲಿಲ್ಲ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಇದೀಗ ಅಮಿತಾಭ್ ಅವರು ಐಶ್ವರ್ಯಾರನ್ನು ಅನ್​ಫಾಲೋ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಚ್ಚನ್​ ಕುಟುಂಬ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

Ads on article

Advertise in articles 1

advertising articles 2

Advertise under the article