ಬೆಳ್ತಂಗಡಿ: ಮರ ಕಡಿಯುತ್ತಿದ್ದಾಗ ಕಟ್ಟಿಂಗ್ ಮಿಷನ್ ಕತ್ತಿಗೆ ತಾಗಿ ಗಂಭೀರ ಗಾಯಗೊಂಡು ವ್ಯಕ್ತಿ ಸಾವು


ಬೆಳ್ತಂಗಡಿ: ಮರ ಕಡಿಯಲೆಂದು ಮರಹತ್ತಿದ್ದ ವ್ಯಕ್ತಿಯ ಕತ್ತಿಗೆ ಅಚಾನಕ್ಕಾಗಿ ಕಟ್ಟಿಂಗ್ ಮಿಷನ್ ತಾಗಿ ಅವರು ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಸಾವ್ಯ ಹೊಸಮನೆ ಎಂಬಲ್ಲಿ ನಡೆದಿದೆ.

ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ(36) ಮೃತಪಟ್ಟ ದುರ್ದೈವಿ.

ಪ್ರಶಾಂತ್ ಪೂಜಾರಿ ತಮ್ಮ ಮನೆಯಂಗಳದಲ್ಲಿದ್ದ ಮರ ಕಡಿಯಲೆಂದು ಕಟ್ಟಿಂಗ್ ಮಿಷನ್ ನೊಂದಿಗೆ ಮರವೇರಿದ್ದರು. ಆದರೆ ಪ್ರಶಾಂತ್ ಪೂಜಾರಿಯವರು ಮರ ಕಡಿಯುತ್ತಿದ್ದಾಗಲೇ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನ್ ನಿಂದ ಅವರ ಕತ್ತಿಗೆ ಗಂಭೀರ ಗಾಯವಾಗಿದೆ. ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಗಂಭೀರ ಗಾಯಗೊಂಡ ಪ್ರಶಾಂತ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ‌‌. ಪ್ರಶಾಂತ್ ಪೂಜಾರಿಗೆ 2024ರ ಮಾರ್ಚ್ ನಲ್ಲಿ ಮದುವೆ ನಿಗದಿಯಾಗಿತ್ತು. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.