Mangalore- ಫ್ಲ್ಯಾಟ್ ನ 4 ನೇ ಮಹಡಿಯಲ್ಲಿ ಬಂಧಿಯಾದ 3 ವರ್ಷದ ಮಗುವಿನ ರಕ್ಷಣೆ
Tuesday, December 26, 2023
ಮಂಗಳೂರು: ಫ್ಲ್ಯಾಟ್ ವೊಂದರ ಕೋಣೆಯೊಳಗೆ ಬಾಕಿಯಾದ 3 ವರ್ಷದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಗರದ ಕೊಡಿಯಾಲ್ ಗುತ್ತಿನಲ್ಲಿ ನಡೆದಿದೆ.
ನಾಲ್ಕನೇ ಮಹಡಿಯಲ್ಲಿದ್ದ ಫ್ಲ್ಯಾಟ್ ವೊಂದರ ಕೋಣೆಯೊಳಗೆ ಇದ್ದ ಮೂರು ವರ್ಷದ ಮಗು ಆಟವಾಡುತ್ತಾ ಬಾಗಿಲಿನ ಚಿಲಕ ಹಾಕಿತ್ತು. ಹೊರಗಿದ್ದವರಿಗೆ ಅದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಮಾಹಿತಿ ಪಡೆದ ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿದರು.
ಅಪಾರ್ಟ್ ಮೆಂಟ್ ನ ಮೇಲ್ಬಾಗದಿಂದ ಹಗ್ಗದ ಸಹಾಯದಿಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಿನಿಂದ ಇಳಿದು ಮಗುವಿದ್ದ ಕೋಣೆಯೊಳಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.