ವೈದಿಕ ಜ್ಯೋತಿಷ್ಯದಲ್ಲಿ, ಗುರು ಗ್ರಹವನ್ನು ದೇವಗುರು ಎಂದು ಕರೆಯಲಾಗುತ್ತದೆ. ಗುರು ಗ್ರಹ ಸಂತೋಷ, ಸಮೃದ್ಧಿ, ಅದೃಷ್ಟ, ಗೌರವ, ಕೀರ್ತಿ ಮತ್ತು ಜ್ಞಾನವನ್ನು ಕರುಣಿಸುವಾತ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಾನವನ್ನು ಬದಲಾಯಿಸಲು ಒಂದು ವರ್ಷವನ್ನು ತೆಗೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಗುರುವು ಮೇಷ ರಾಶಿಯಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ.
ಮೇಷ ರಾಶಿ : ಮೇಷ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು ಬಹಳ ಶುಭಕರವಾಗಿರಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತಲೇ ಹೋಗುವುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಅದೃಷ್ಟ ಕೈ ಹಿಡಿಯುತ್ತದೆ. ವಿವಾಹಿತರ ಜೀವನದಲ್ಲಿ ಸಂತೋಷ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜ್ಯಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. 2024 ವರ್ಷವು ಅನೇಕ ಸಂತೋಷ ಮತ್ತು ಯಶಸ್ಸನ್ನು ನೀಡುತ್ತದೆ. ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಸಂಪತ್ತಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ.
ಧನು ರಾಶಿ : ಗುರುಗ್ರಹದ ನೇರ ಸಂಚಾರದಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗವು ಧನು ರಾಶಿಯವರ ಭಾಗಿ ಬೆಳಗಲಿದೆ. 2024ನೇ ವರ್ಷ ನಿಮ್ಮ ಪಾಲಿಗೆ ಸಂತೋಷವನ್ನು ತರಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.