-->
1000938341
ಕ್ರಿಕೆಟ್ ನಲ್ಲಿ ಭಾರತದ ಕೈತಪ್ಪಿದ ವಿಶ್ವಕಪ್ - ಮನನೊಂದು ಯುವಕ ಆತ್ಮಹತ್ಯೆಗೆ ಶರಣು

ಕ್ರಿಕೆಟ್ ನಲ್ಲಿ ಭಾರತದ ಕೈತಪ್ಪಿದ ವಿಶ್ವಕಪ್ - ಮನನೊಂದು ಯುವಕ ಆತ್ಮಹತ್ಯೆಗೆ ಶರಣು

ಬಂಕುರ: ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ವಿಶ್ವಕಪ್​ ಕ್ರಿಕೆಟ್​ ಫೈನಲ್ ಪಂದ್ಯದಲ್ಲಿ ತವರು ನೆಲದಲ್ಲಿಯೇ ಭಾರತ ಸೋತು ವಿಶ್ವಕಪ್ ಕೈತಪ್ಪಿದೆ. ಇನ್ನು ಭಾರತವೇ ಗೆಲ್ಲುತ್ತದೆ ಎಂದು ಬೆಟ್ ಕಟ್ಟಿ ಯಾರ್ಯಾರು ಏನೇನು ಕಳೆದುಕೊಂಡಿದ್ದಾರೋ? ಆದರೆ ಇಲ್ಲೊಬ್ಬ ಯುವಕನೋರ್ವನು ಭಾರತದಿಂದ ವಿಶ್ವಕಪ್ ಕೈತಪ್ಪಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪಶ್ಚಿಮಬಂಗಾಳದ ಬಂಕುರ ಜಿಲ್ಲೆಯ ರಾಹುಲ್ ಲೋಹರ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೆಲಿಯತೋರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಈ ಪ್ರಕರಣ ನಡೆದಿದೆ.

ನಿನ್ನೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿದ್ದು, ಪಂದ್ಯದಲ್ಲಿ ಭಾರತ ಸೋತ ಬಳಿಕ ಈ ಸಾವಿಗೆ ಶರಣಾಗಿದ್ದಾನೆ. ಕ್ರಿಕೆಟ್ ಹೊರತಾಗಿ ಆತನಿಗೆ ಬೇರೆ ಯಾವುದೇ ಅಂಥ ಅಟ್ಯಾಚ್​​ಮೆಂಟ್ ಇರಲಿಲ್ಲ ಈತನ ಸಂಬಂಧಿ ಪೊಲೀಸರಿಗೆ ತಿಳಿಸಿದ್ದಾನೆ.

ಪೊಲೀಸರು ಇದನ್ನ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಇಂದು ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಕ್ರಿಕೆಟ್​ನಲ್ಲಿ ಭಾರತ ಸೋತಿದ್ದಕ್ಕೇ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದ್ದರೂ ಪೊಲೀಸರು ಬೇರೆ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article