ಸರಿಯಾದ ಬಟ್ಟೆ ಧರಿಸಿ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟ ಮಯಾಂತಿ ( Mayanti Langer)


 ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ( Mayanti Langer)  ಇದೀಗ ಅವರು ತನ್ನ ಡ್ರೆಸ್ ನ ಕಾರಣದಿಂದ ಟ್ರೋಲ್ ಆಗಿದ್ದಾರೆ. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿ ಫೈನಲ್ ಪಂದ್ಯದ ವೇಳೆ ತಾನು ಧರಿಸಿದ್ದ ಡ್ರೆಸ್ ಕಾರಣದಿಂದ ಮಯಾಂತಿ ಲ್ಯಾಂಗರ್ ಭಾರಿ ಟ್ರೋಲ್ ಗೊಳಗಾಗಿದ್ದರು.
 
ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಜೊತೆಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಮಯಾಂತಿ ಅವರು ಸ್ಕರ್ಟ್ ಮತ್ತು ಬ್ಲೇಜರ್ ಧರಿಸಿದ್ದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಧಿರಿಸನ್ನು ಸಂದರ್ಭಕ್ಕೆ ಸೂಕ್ತವಲ್ಲದ್ದು ಎಂದು ಟ್ರೋಲ್ ಮಾಡಿದ್ದಾರೆ.

 ಗವಾಸ್ಕರ್ ಅವರ ಔಪಚಾರಿಕ ಉಡುಗೆಗೆ ಹೋಲಿಕೆ ಮಾಡಲಾಗಿತ್ತು. ಅಲ್ಲದೆ ಕೆಲವರು ಫೋಟೊ ತಿರುಚಿ ಮಯಾಂತಿ ಅವರು ಪ್ಯಾಂಟ್ ಧರಿಸಿದಂತೆ ಫೋಟೊಶೂಟ್ ಮಾಡಿದ್ದರು. ಇದೀಗ ಲ್ಯಾಂಗರ್ ಅವರು ಟ್ರೋಲ್‌ ಗಳಿಗೆ ಉತ್ತರಿಸಿದ್ದು, “ಫೈನಲ್ ಪಂದ್ಯಕ್ಕೆ ನಾವು ಸಂಪೂರ್ಣ ಸೂಟ್ ಅನ್ನು ಖರೀದಿಸಬಹುದು” ಎಂದು ವಿಡಂಬನಾತ್ಮಕವಾಗಿ ಹೇಳಿದ್ದಾರೆ.

ಬಜೆಟ್‌ ಬಗ್ಗೆ ನಿಮ್ಮ ನಿಜವಾದ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟಿದ್ದೇನೆ. ನನ್ನನ್ನು ಅಸಂಖ್ಯಾತ ಪೋಸ್ಟ್‌ ಗಳಲ್ಲಿ ಟ್ಯಾಗ್ ಮಾಡಲಾಗಿದೆ, ನನ್ನ ಕುಟುಂಬ ಮತ್ತು ಸ್ನೇಹಿತರು ಚಿತ್ರಗಳಿಂದ ಮುಳುಗಿದ್ದಾರೆ, ಕೆಲವರು ಬಹುಶಃ ಬ್ಲೇಜರ್ ಡ್ರೆಸ್‌ ನ ದೌರ್ಜನ್ಯವನ್ನು ಕಡಿಮೆ ಮಾಡಲು ಅದನ್ನು ಬದಲಾಯಿಸಿದ್ದಾರೆ. ಭಯಪಡಬೇಡಿ, ಫೈನಲ್ ಗಾಗಿ ನಾವು ಸಂಪೂರ್ಣ ಸೂಟ್ ಅನ್ನು ಖರೀದಿಸಬಹುದು”ಎಂದು ಮಯಾಂತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಅಲ್ಲದೆ ಕಪ್ಪು ಪೂರ್ಣ ಸೂಟ್‌ ನಲ್ಲಿರುವ ಚಿತ್ರವನ್ನೂ ಹಂಚಿಕೊಂಡರು.

2007 ರಲ್ಲಿ ತನ್ನ ಬ್ರಾಡ್ ಕಾಸ್ಟಿಂಗ್ ವೃತ್ತಿಯನ್ನು ಪ್ರಾರಂಭಿಸಿದ ಲ್ಯಾಂಗರ್ (Mayanti Langer)
 ಸದ್ಯ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಪ್ರಸಾರಕರಲ್ಲಿ ಒಬ್ಬರಾದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಕ್ರಿಕೆಟ್ ವಿಶ್ವಕಪ್, ಐಸಿಸಿ ಕ್ರಿಕೆಟ್ ಟ್ವೆಂಟಿ 20 ವಿಶ್ವಕಪ್ ಸೇರಿದಂತೆ ಹಲವಾರು ಪ್ರಮುಖ ಕ್ರಿಕೆಟ್ ಕೂಟಗಳಲ್ಲಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.