ಮುಸ್ಸಂಜೆ ವೇಳೆಯಲ್ಲಿ ಈ ರೀತಿಯ ಸೂಚನೆಗಳು ಸಿಕ್ಕರೆ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆ ನಿಮ್ಮ ಮೇಲಿರುತ್ತದೆ..!


ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಮುಸ್ಸಂಜೆ ಸಮಯದಲ್ಲಿ ಯಾವೆಲ್ಲಾ ಶುಭ ಸೂಚನೆಗಳನ್ನು ನೀಡುತ್ತಾಳೆ ಗೊತ್ತೇ..?



1. ಸೂರ್ಯಾಸ್ತದಲ್ಲಿ ಸಂಪತ್ತಿನ ಸೂಚನೆ:
ಸಮಾನ್ಯವಾಗಿ ಎಲ್ಲರೂ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ತಮ್ಮ ಮನೆಯಲ್ಲಿ ನೆಲೆಸಬೇಕೆಂದು ಬಯಸುತ್ತಾರೆ. ಆದರೆ ಆಕೆ ನಿಮ್ಮ ಮನೆಯನ್ನು ಪ್ರವೇಶಿಸುವ ಮೊದಲು ಸೂರ್ಯಾಸ್ತದ ಸಮಯದಲ್ಲಿ ಕೆಲವೊಂದು ಶುಭ ಸೂಚನೆಗಳನ್ನು ನೀಡುತ್ತಾಳೆ. 

2. ಹಕ್ಕಿಗಳ ಗೂಡು:
ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಸುತ್ತಮುತ್ತ ಹಕ್ಕಿ ಗೂಡು ಕಟ್ಟಿದ್ದರೆ ಲಕ್ಷ್ಮಿ ದೇವಿಯು ನಿಮ್ಮಿಂದ ಸಂತೋಷಗೊಂಡಿದ್ದಾಳೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು ಶೀಘ್ರದಲ್ಲೇ ಹಣವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ನಿಮಗೆ ಸೂಚಿಸುತ್ತದೆ. 

3. ಇವುಗಳ ಕನಸು:
ಅಷ್ಟೇ ಅಲ್ಲ, ನಿಮ್ಮ ಕನಸಿನಲ್ಲಿ ಕಪ್ಪು ಇರುವೆಗಳ ಹಿಂಡು ಅಥವಾ ಕೊಳಲು, ಕಮಲ ಅಥವಾ ಗುಲಾಬಿ ಹೂವುಗಳು, ಪೊರಕೆ, ಹಲ್ಲಿ ಇತ್ಯಾದಿಗಳನ್ನು ನೀವು ನೋಡಿದರೆ ಅದು ಲಕ್ಷ್ಮಿ ದೇವಿಯು ನಿಮ್ಮೊಂದಿಗೆ ಸಂತೋಷವಾಗಿದ್ದಾಳೆ ಎಂಬುದನ್ನು ಸೂಚಿಸುತ್ತದೆ. ಲಕ್ಷ್ಮಿ ದೇವಿಯ ಆಗಮನದಿಂದ ಧನಾಗಮನವಾಗುವುದು ಎಂಬುದು ಇತರ ಸಂಕೇತವಾಗಿದೆ.