ಬೆಂಗಳೂರು ಕಂಬಳ- ಉಪ್ಪಿನಂಗಡಿಯಿಂದ ನಾಳೆ ಮೆರವಣಿಗೆ ಮೂಲಕ ಕೋಣಗಳ ಪಯಣ



ಮಂಗಳೂರು: ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ  ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಕಂಬಳ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ.

ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ತೆರಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಿಂದ  ಕಂಬಳ ಕೋಣಗಳು ಒಟ್ಟಾಗಿ ತೆರಳಲಿದೆ. ಈಗಾಗಲೇ ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು 150 ಮಂದಿ ಹೆಸರು ನೊಂದಾಯಿಸಿದ್ದಾರೆ. 

ಉಪ್ಪಿನಂಗಡಿಯಿಂದ ಬೆಳಿಗ್ಗೆ 9 ಗಂಟೆಗೆ ಕಂಬಳ ಕೋಣಗಳನ್ನು ಕೊಂಡೊಯ್ಯಲು ನಿರ್ಧರಿಸಲಾಗಿದೆ. ಲಾರಿಗಳಲ್ಲಿ ಕೋಣಗಳನ್ನು ಹಾಕಿ ಅವುಗಳನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತದೆ. ದಾರಿ ಮಧ್ಯೆ ಹಾಸನದಲ್ಲಿ ಕೋಣಗಳಿಗೆ ವಿಶ್ರಾಂತಿ ನೀಡಿ ಅಲ್ಲಿ ಸಭೆ ನಡೆಸಿ ಬಳಿಕ ಬೆಂಗಳೂರಿಗೆ ಪ್ರಯಾಣ ಮುಂದುವರಿಯಲಿದೆ. ಇದರ ಜೊತೆಗೆ ಕೋಣಗಳಿಗೆ 1 ಟ್ಯಾಂಕರ್ ನೀರನ್ನು ಮಂಗಳೂರಿನಿಂದ ಕೊಂಡೊಯ್ಯಲಾಗುತ್ತದೆ. ಆ್ಯಂಬುಲೆನ್ಸ್ ಜೊತೆಗೆ ಪಶುವೈದ್ಯರು ಇರಲಿದ್ದಾರೆ.