ಕುಸಿದ ಮೇಲ್ಛಾವಣಿ: ಕೂದಲೆಳೆಯ ಅಂತರದಲ್ಲಿ ಪತ್ನಿ ಪಾರು, ಪತಿ ಸಾವು


ಪಾಣಿಪತ್: ಬೈಕ್​ನಲ್ಲಿ ಸಂಚರಿಸುತ್ತಿದ್ದ ದಂಪತಿ ಮೇಲೆ 80 ವರ್ಷ ಹಳೆಯ ಪಾಳುಬಿದ್ದ ಮನೆಯ ಮೇಲ್ಛಾಣಿ ದಿಢೀರ್​ ಕುಸಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಪತ್ನಿ ಪಾರಾಗಿ, ಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಣಿಪತ್‌ನ ಪಚ್ರಂಗ ಬಜಾರ್‌ನಲ್ಲಿ ವರದಿಯಾಗಿದೆ.

ಸುತನ ಗ್ರಾಮದ ಸುಶೀಲ್ ಮೃತಪಟ್ಟ ವ್ಯಕ್ತಿ.

ಅಪಘಾತ ಸಂಭವಿಸುವ ಸಂದರ್ಭ ಮನೆಯನ್ನು ಕೆಡವಲಾಗುತ್ತಿತ್ತು. ಇದರ ಅವಶೇಷಗಳಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸುಶೀಲ್ ಸಾವನ್ನಪ್ಪಿದ್ದಾರೆ. ಕಟ್ಟಡದ ಬಾಲ್ಕನಿ ಕುಸಿಯುವ ಕೆಲವೇ ಸಕೆಂಡ್​ಗಳಿಗೂ ಮುನ್ನ ಬೈಕ್​ನಿಂದ ಪತ್ನಿ ಜಿಗಿದಿದ್ದಾರೆ. ಆಕೆ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾದ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ.

ವಾಹನ ದಟ್ಟಣೆಯಿರುವ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದ ಈ ಅವಘಡ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಡವುವ ಸಂದರ್ಭದಲ್ಲಿ ಕಾರ್ಮಿಕರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಸ್ಥಳೀಯ ಅಂಗಡಿಯ ಮಾಲೀಕರು ಆರೋಪಿಸಿದ್ದಾರೆ.