ನವದೆಹಲಿ: ದತ್ತು ಪಡೆದು ಸಾಕಿ ಸಲಹಿ ಆತ ಯುವಕನಾಗುತ್ತಿದ್ದಂತೆ ಆತನನ್ನೇ ಮಹಿಳೆಯೊಬ್ಬಳು ವಿವಾಹವಾಗಿದ್ದಾಳೆ. ತಾಯಿ ತನ್ನ ಮಲಮಗನನ್ನು ಮದುವೆಯಾಗಿದ್ದಾಳೆ ಎಂದರೆ ಆಶ್ಚರ್ಯವಾಗುತ್ತಿದೆಯೇ? ಆದರೂ ಇದು ಸತ್ಯ.
ಸಂಗೀತ ಶಿಕ್ಷಕಿ ಮತ್ತು ಗಾಯಕಿ ಐಸಿಲು ಚಿಝೆವ್ಸ್ಕಯಾ ಮಿಂಗಲಿಮ್ (53) ಹಾಗೂ ಡೇನಿಯಲ್ ಚಿಜೆವ್ಸ್ಕಿ (22) ವಿವಾಹವಾದ ಜೋಡಿ. ಇಬ್ಬರ ನಡುವಿನ ವಯಸ್ಸಿನ ಅಂತರ 31 ವರ್ಷಗಳು.
ಡೇನಿಯಲ್ ಚಿಜೆವ್ಸ್ಕಿಯನ್ನು 8ರ ಹುಡುಗನಿದ್ದಾಗ ಆಕೆ ದತ್ತು ಪಡೆದು ಬೆಳೆಸಿದ್ದಳು. ಇದೀಗ ಆತನಿಗೆ 22 ವರ್ಷ. ಮಹಿಳೆ ಸಾಕಿ, ಸಲಹಿದ್ದ ಮಗನನ್ನೇ ಮದುವೆಯಾಗಿದ್ದಾಳೆ. ರಷ್ಯಾದ ತಟರ್ಸ್ತಾನ್‌ನ ಮಹಿಳೆ ಐಸಿಲು ಚಿಝೆವ್ಸ್ಕಯಾ ಮಿಂಗಲಿಮ್ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಳು ಮತ್ತು ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಂಗೀತವನ್ನು ಕಲಿಸುತ್ತಿದ್ದಳು. ಅಲ್ಲಿ, ಡೇನಿಯಲ್ ಎಂಬ 8 ವರ್ಷದ ಹುಡುಗ ಸಂಗೀತದಲ್ಲಿ ಆಸಕ್ತಿ ತೋರಿಸಿದ್ದಾನೆ. ಆದ್ದರಿಂದ ಅನಾಥಾಶ್ರಮದ ನಿರ್ವಾಹಕರೊಂದಿಗೆ ಮಾತನಾಡಿ, ವಿಧಿವಿಧಾನಗಳನ್ನು ಪೂರ್ಣಗೊಳಿಸಿ ದತ್ತು ಪಡೆದಿದ್ದಾಳೆ. ಆತನನ್ನು 14 ವರ್ಷ ಸಾಕಿದ್ದಾಳೆ. ಇದೀಗ ಅವನಿಗೆ 22 ವರ್ಷ. ಆಕೆಗೆ 53 ವರ್ಷ. ಸಂಗೀತದ ಮೇಲೆ ಉತ್ತಮ ಹಿಡಿತ ಹೊಂದಿರುವ ಡೇನಿಯಲ್ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾನೆ. ವಿಚಿತ್ರವೆಂದರೆ ಇಬ್ಬರು ಇಷ್ಟಪಟ್ಟರು. ಇಬ್ಬರೂ ಅಕ್ಟೋಬರ್ 20 ರಂದು ಟಾಟರ್ಸ್ತಾನ್ ಗಣರಾಜ್ಯದ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ವಿವಾಹವಾಗಿದ್ದಾರೆ.
ಈ ಮದುವೆ ವಿಚಾರ ತಿಳಿದ ಅನಾಥಾಶ್ರಮದ ಆಡಳಿತಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಡೇನಿಯಲ್ ಹೀಗೆ ಸಾಕಿದ ತಾಯಿಯನ್ನೇ ಮದುವೆಯಾಗಿದ್ದಾನೆ ಎನ್ನುವ ವಿಚಾರ ತಿಳಿದ ನಂತರ, ಹೀಗೆ ದತ್ತು ಕೊಟ್ಟಿದ್ದ ನಾಲ್ಕು ಹುಡುಗಿಯರು ಮತ್ತು ಒಬ್ಬ ಹುಡುಗನನ್ನು ಆಶ್ರಮದ ನಿರ್ವಾಹಕರು ಹಿಂದಕ್ಕೆ ಕರೆದೊಯ್ದರು. ಈ ತಾಯಿ ಹಾಗೂ ದತ್ತು ಪುತ್ರನ ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.