ಮಕ್ಕಳ ಮೇಲೆ ದೌರ್ಜನ್ಯ ಬೆಂಬಲಿಸಿದ ತಾಯಿಗೆ 40 ವರ್ಷ ಜೈಲು ಶಿಕ್ಷೆ
Wednesday, November 29, 2023
ತಿರುವನಂತಪುರ: ಹೆತ್ತ ಮಕ್ಕಳಿಬ್ಬರ ಮೇಲೆ ಸಹ ಜೀವನ ಸಂಗಾತಿಗಳು ಅತ್ಯಾಚಾರ ಎಸಗಲು ಸಹಕಾರ ನೀಡಿದ ದುಷ್ಟ ತಾಯಿಗೆ ಕೇರಳದ ತಿರುವನಂತಪುರದ ತ್ವರಿತಗತಿ ವಿಚಾರಣಾ ನ್ಯಾಯಾಲಯ ಪೋಕ್ಸೊ ಕಾಯಿದೆಯಡಿ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಜತೆಗೆ 20 ಸಾವಿರ ರೂ. ದಂಡ ವಿಧಿಸಿ ಅಪರೂಪದ ತೀರ್ಪು ನೀಡಿದೆ. ಪೋಕ್ಸೊ ಕೇಸ್‌ನಲ್ಲಿ ಮಹಿಳೆಯೊಬ್ಬರು ಶಿಕ್ಷೆಗೆ ಗುರಿಯಾದ ಪ್ರಕರಣ ಇದಾಗಿದೆ.
ಮಾನಸಿಕ ಅಸ್ವಸ್ಥನಾಗಿದ್ದ ಗಂಡನನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿ ಜತೆ ಅಪಾದಿತ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದಳು. ಸಹ ಜೀವನ ನಡೆಸುತ್ತಿದ್ದ ವ್ಯಕ್ತಿ ಆಕೆಯ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 2018-2019 ರ ಅವಧಿಯಲ್ಲಿ ಹೆತ್ತ ತಾಯಿಯ ಸಹಕಾರ ಪಡೆದು ಇಬ್ಬರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಮಕ್ಕಳ ನೋವು ಕೇಳಿದ ಅಜ್ಜಿ ಪೊಲೀಸರಿಗೆ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಮಹಿಳೆ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದರು.