-->
1000938341
ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್  ಮಿಸ್ ಯೂನಿವರ್ಸ್ 2023 ಆಗಿ ಆಯ್ಕೆ- ಭಾರತದ ಶ್ವೇತಾ ಶಾರಾದ ಮಿಸ್

ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಮಿಸ್ ಯೂನಿವರ್ಸ್ 2023 ಆಗಿ ಆಯ್ಕೆ- ಭಾರತದ ಶ್ವೇತಾ ಶಾರಾದ ಮಿಸ್


ನ್ಯೂಯಾರ್ಕ್: ಮೊದಲ ಬಾರಿಗೆ ನಿಕರಾಗುವಾ ದೇಶದ ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಯೂನಿವರ್ಸ್ 2023 ಆಗಿ ಆಯ್ಕೆಯಾಗಿದ್ದಾರೆ. ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫ್ ಪಿನೆಡಾ ಅರೆನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ.

ಮಿಸ್ ಯೂನಿವರ್ಸ್ 2022 - USA ಯ ಆರ್ ಬೊನ್ನಿ ಗೇಬ್ರಿಯಲ್ ಅವರು ಶೆನ್ನಿಸ್ ಪಲಾಸಿಯೋಸ್ ಅವರಿಗೆ ಕಿರೀಟ ತೊಡಿಸಿದರು. ಮಿಸ್ ಯೂನಿವರ್ಸ್ ಗೆದ್ದ ಮೊದಲ ನಿಕರಾಗುವಾ ಮಹಿಳೆ ಎಂಬ ಹೆಗ್ಗಳಿಕೆಗೆ ಶೆನ್ನಿಸ್ ಪಲಾಸಿಯೋಸ್ ಪಾತ್ರರಾಗಿದ್ದಾರೆ ಎಂದು ವರದಿ ತಿಳಿಸಿದೆ.


ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಎರಡನೇ ರನ್ನರ್ ಅಪ್ ಆಗಿದ್ದರೆ, ಥಾಯ್ಲೆಂಡ್‌ ಆಂಟೋನಿಯಾ ಪೋರ್ಸಿಲ್ಡ್ ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು.

ಈ ವರ್ಷ, ಚಂಡೀಗಢ ಮೂಲದ ಶ್ವೇತಾ ಶಾರದಾ ಮಿಸ್ ಯೂನಿವರ್ಸ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರು ಅಗ್ರ 20ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಗ್ರ 10ರಲ್ಲಿ ಸ್ಥಾನ ಪಡೆಯಲು ಅವರು ವಿಫಲರಾದರು. ಈ ವರ್ಷ, ಪಾಕಿಸ್ತಾನವು ಮೊದಲ ಬಾರಿಗೆ ಮಿಸ್ ಯೂನಿವರ್ಸ್‌ನಲ್ಲಿ ಭಾಗವಹಿಸಿತ್ತು. ಈ ವರ್ಷ ನಡೆದ 72ನೇ ಮಿಸ್ ಯೂನಿವರ್ಸ್‌ ಸ್ಪರ್ಧೆಯಲ್ಲಿ 84 ದೇಶಗಳು ಮತ್ತು ಪ್ರಾಂತ್ಯಗಳ ಸ್ಪರ್ಧಿಗಳು ಸ್ಪರ್ಧಿಸಿದ್ದರು.

Ads on article

Advertise in articles 1

advertising articles 2

Advertise under the article