ಕಟಪಾಡಿ: ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು


ಕಾಪು: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಕಟಪಾಡಿ ಮೂಡಬೆಟ್ಟು ಗ್ರಾಮದ ಕಲ್ಲಟ್ಟ ಎಂಬಲ್ಲಿ ಸಂಭವಿಸಿದೆ.

ಕಲ್ಲಟ್ಟ ನಿವಾಸಿ ಅನನ್ಯಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಅನನ್ಯಾ ಶಂಕರಪುರ ಸೈಂಟ್ ಜಾನ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವ್ತಾಸಂಗ ಮಾಡುತ್ತಿದ್ದಳು. ರಾತ್ರಿ ವೇಳೆ ಹೆತ್ತವರು ಹಾಗೂ ಸಹೋದರನೊಂದಿಗೆ ಒಂದೇ ಕೋಣೆಯಲ್ಲಿ ಮಲಗಿದ್ದಳು. ಆದರೆ ಆ ಬಳಿಕ ಪಕ್ಕದ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಓದಿನಲ್ಲಿ ಚುರುಕಾಗಿದ್ದ ಅನನ್ಯಾ ಎಲ್ಲರೊಂದಿಗೂ ಅನ್ನೋನ್ಯವಾಗಿದ್ದಳು. ಆದರೆ ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. 

ಈ ಬಗ್ಗೆ ಕಾಪು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.