-->
1000938341
ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಯುವತಿಯರು ತಲವಾರು ಹಿಡಿಯಬೇಕು - ಸಾಧ್ವಿ ಸರಸ್ವತಿ ದೇವಿ

ಮಂಗಳೂರು: ಲವ್ ಜಿಹಾದ್ ವಿರುದ್ಧ ಹಿಂದೂ ಯುವತಿಯರು ತಲವಾರು ಹಿಡಿಯಬೇಕು - ಸಾಧ್ವಿ ಸರಸ್ವತಿ ದೇವಿ

ಮಂಗಳೂರು: ಭಾರತವನ್ನು ಉಳಿಸಲು ಹಿಂದೂಗಳು ಒಂದಾಗುವ ಅವಶ್ಯಕತೆ ಇದೆ‌.‌ ಸನಾತನ ಧರ್ಮದ ರಕ್ಷಣೆಗೆ ಶಸ್ತ್ರ ಬಳಸುವುದು ಅವಶ್ಯಕ. ಆದ್ದರಿಂದ ಲವ್ ಜಿಹಾದ್ ವಿರುದ್ಧ ಯುವತಿಯರು ತಲವಾರುಗಳನ್ನು ಧಾರಣೆ ಮಾಡಬೇಕೆಂದು ಮಧ್ಯಪ್ರದೇಶದ ಸಾಧ್ವಿ ಸರಸ್ವತಿ ದೇವಿ ಹೇಳಿದರು.

ಬಂಟ್ವಾಳದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಬಜರಂಗಳ ದಿಂದ ಶೌರ್ಯಜಾಗರಣ ರಥ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂಗಳು ಜಾತಿವ್ಯವಸ್ಥೆಯಿಂದ ಬೇರ್ಪಡಬಾರದು. ನಮ್ಮೊಡನೆ ಇದ್ದು ಈಗ ಕೆಲವರು ಒಗ್ಗಟ್ಟಾಗಿ ಭೀತಿ ಹುಟ್ಟಿಸುತ್ತಿದ್ದಾರೆ. ಇದಕ್ಕೆ ಶಿವಮೊಗ್ಗದ ಗಲಭೆಯೇ ಸಾಕ್ಷಿ ಎಂದರು.

ಈದ್ ಮಿಲಾದ್ ವೇಳೆ ಟಿಪ್ಪುಸುಲ್ತಾನ್, ಔರಂಗಜೇಬನ ದೊಡ್ಡ ದೊಡ್ಡ ಕಟೌಟ್ ಹಾಕಲಾಗಿತ್ತು. ಇದು ರಾಮ, ಕೃಷ್ಣರ ಭೂಮಿ, ಹನುಮಾನ್ ಜನಿಸಿದ ಭೂಮಿ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜರ ಭೂಮಿ. ಟಿಪ್ಪುಸುಲ್ತಾನ್, ಔರಂಗಜೇಬನ ಭೂಮಿ‌ಯಲ್ಲ. ಇಂತಹ ದುಷ್ಟರಿಗೆ ಉಗ್ರವಾಗಿ ಉತ್ತರ ನೀಡಬೇಕಾಗಿದೆ‌.‌ ಹಿಂದೂಗಳ ಅಸ್ತಿತ್ವವನ್ನು ಕೆಣಕಿದರೆ ಇಡೀ ಸಮುದಾಯವನ್ನು ನಾಶ ಮಾಡುವ ತಾಕತ್ತು ಹಿಂದೂಗಳಿಗಿದೆ ನೆನಪಿರಲಿ.

ಕರ್ನಾಟಕದಲ್ಲಿ ಇರಬೇಕಾದರೆ ರಹೀಮ್, ರಸ್ತಾನ್ ಗಳಾಗಿ ಇರಬೇಕು. ಟಿಪ್ಪುಸುಲ್ತಾನ್, ಔರಂಗಜೇಬ್ ಆಗಲು ಹೊರಟರೆ ಅಂತವರ ಅಸ್ತಿತ್ವವೇ ನಾಶವಾಗುತ್ತದೆ. ಟಿಪ್ಪುಸುಲ್ತಾನ್, ಔರಂಗಜೇಬ್, ಬಾಬರ್ ಲೂಟಿ ಕೋರರು, ಪಾಪಿಗಳಾಗಿದ್ದರು. ಕರ್ನಾಟಕದ ಹಿಂದೂಗಳು ಜಾಗೃತರಾಗಬೇಕು ಎಂದು ಸಾಧ್ವಿ ಸರಸ್ವತಿ ದೇವಿ ಹೇಳಿದರು.Ads on article

Advertise in articles 1

advertising articles 2

Advertise under the article