ವೇಶ್ಯಾವಾಟಿಕೆ ಅಡ್ಡೆಗೆ ದಾಳಿ: ಇಬ್ಬರು ವಿದೇಶಿ ಯುವತಿಯರ ರಕ್ಷಣೆ


ಬೆಂಗಳೂರು: ವಿದೇಶಿ ಯುವತಿಯರನ್ನು ಇಟ್ಟುಕೊಂಡು ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಕೆ.ಆರ್.ಪುರಂ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಆಫ್ರಿಕಾ ಮೂಲದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆಂದು ತಿಳಿದು ಬಂದಿದೆ.

ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರೀನ್ ವುಡ್ ಲೇಔಟ್‌ನ ಮನೆಯೊಂದರಲ್ಲಿ ಡ್ರಗ್ಸ್ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಲಭ್ಯವಾಗಿದೆ. ಇದರನ್ವಯ ಪೊಲೀಸರು ಸೆ.1ರ ರಾತ್ರಿ ಕಾರ್ಯಾಚರಣೆ ನಡೆಸಿದ್ದು, ದಾಳಿಯ ವೇಳೆ ದಂಧೆ ನಡೆಸುತ್ತಿದ್ದವರು ಪರಾರಿಯಾಗಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಬಂಧಿತ ಇಬ್ಬರು ವಿದೇಶಿ ಯುವತಿಯರನ್ನು ವಿಚಾರಣೆ ನಡೆದಿದೆ. ಮಾನವ ಕಳ್ಳಸಾಗಾಣಿಕೆ ಮೂಲಕ ಈ ಯುವತಿಯರನ್ನು ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ತಿಳಿದುಬಂದಿದೆ. ಯುವತಿಯರ ಪಾಸ್ ಪೋರ್ಟ್ ಕಸಿದಿಟ್ಟುಕೊಂಡು ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ. ಈ ಬಗ್ಗೆ ಮತ್ತಷ್ಟು ವಿಚಾರಣೆ ಕೈಗೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu