-->
1000938341
ಸುಳ್ಯ: ನಗರ ಪಂಚಾಯತ್ ಉದ್ಯೋಗಿ ಮಹಿಳೆಯ ಕತ್ತಿನಲ್ಲಿದ್ದ ಹುಲಿಯುಗುರು ಲಾಕೆಟ್ ಫೋಟೋ ವೈರಲ್ - ಅರಣ್ಯಾಧಿಕಾರಿಗಳಿಂದ ತನಿಖೆ

ಸುಳ್ಯ: ನಗರ ಪಂಚಾಯತ್ ಉದ್ಯೋಗಿ ಮಹಿಳೆಯ ಕತ್ತಿನಲ್ಲಿದ್ದ ಹುಲಿಯುಗುರು ಲಾಕೆಟ್ ಫೋಟೋ ವೈರಲ್ - ಅರಣ್ಯಾಧಿಕಾರಿಗಳಿಂದ ತನಿಖೆ


ಸುಳ್ಯ: ಸದ್ಯ ರಾಜ್ಯದಲ್ಲಿ ಹುಲಿಯುಗುರಿನ ಲಾಕೆಟ್ ಗಳ ಸುದ್ದಿಯೇ ಸಖತ್ ಸದ್ದು ಮಾಡುತ್ತಿದೆ. ವರ್ತೂರು ಸಂತೋಷ್ ಬಿಗ್ ಬಾಸ್ ನಿಂದಲೇ ಅರೆಸ್ಟ್ ಆದ ಬಳಿಕ  ಅನೇಕ ಸೆಲೆಬ್ರಿಟಿಗಳ ತಲೆಮೇಲೆ ತೂಗುಗತ್ತಿ‌ ತೂಗುತ್ತಿದೆ‌. ಇದೀಗ ಈ ಹುಲಿಯುಗುರು ಲಾಕೆಟ್ ಸಾಮಾನ್ಯ ಮಹಿಳೆಯರೊಬ್ಬರಿಗೂ ಕಂಟಕವಾಗಿದೆ.

ಸುಳ್ಯದ ನಗರ ಪಂಚಾಯತ್ ಉದ್ಯೋಗಿ ಶಶಿಕಲಾ ಅವರ ಕತ್ತಿನಲ್ಲಿರುವ ಹುಲಿಯುಗುರು ಮಾದರಿಯ ಫೋಟೊಗಳು ವೈರಲ್ ಆಗುತ್ತಿದೆ‌‌. ಇದರ ಬೆನ್ನಲ್ಲೇ ಎಚ್ಚೆತ್ತ ಅರಣ್ಯಾಧಿಕಾರಿಗಳು ಆಕೆಯ ಬೆನ್ನು ಬಿದ್ದಿದ್ದಾರೆ. ಶಶಿಕಲಾ ಕೊರಳಿನಲ್ಲಿ ಹುಲಿ ಉಗುರನ್ನು ಹೋಲುವ ಲಾಕೆಟ್ ಇತ್ತು. ಈ ಪೋಟೊ ಎಲ್ಲೆಡೆ ವೈರಲ್ ಆಗುತ್ತಿತ್ತು. ತಕ್ಷಣ ಸುಳ್ಯ ಅರಣ್ಯ ಇಲಾಖೆಯವರು ಶಶಿಕಲಾ ಅವರನ್ನು ಸಂಪರ್ಕಿಸಿ ಕಚೇರಿಗೆ ಬರುವಂತೆ ಸೂಚಿಸಿದ್ದರು. ಶಶಿಕಲಾ ಅವರು ಆ ಲಾಕೆಟ್ ನೊಂದಿಗೆ ವಲಯಾರಣ್ಯಾಧಿಕಾರಿಗಳಿಗೆ ಅದನ್ನು ಒಪ್ಪಿಸಿದ್ದಾರೆ. ಇದು ಅಸಲಿ ಹುಲಿ ಉಗುರಿನ ಲಾಕೆಟ್ ಅಲ್ಲ ಮಾರಾಟ ಮಾಡಲು ಬಂದವರಿಂದ ತನ್ನ ತಾಯಿ ಖರೀದಿಸಿ,‌ ಧರಿಸುತ್ತಿದ್ದರು. ತಾನು ಕೂಡಾ ಅನೇಕ ವರ್ಷಗಳಿಂದ ಉಪಯೋಗಿಸುತ್ತಿದ್ದೇನೆ. ಫೋಟೋ ವೈರಲ್ ಆಗಿದ್ದರಿಂದ ಅರಣ್ಯ ಇಲಾಖೆಯವರು ಫೋನ್ ಮಾಡಿದಾಗ ಲಾಕೆಟ್ ಕೊಟ್ಟು ಬಂದಿದ್ದೇನೆ ಎಂದು ಶಶಿಕಲಾ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಶಿಕಲಾ ಅವರ ಹುಲಿ ಉಗುರು ಧರಿಸಿರುವ ಪೋಟೋ ವೈರಲ್ ಆಗಿರುವುದರಿಂದ ತನಿಖೆ ನಡೆಸಿದ್ದೇವೆ. ಲಾಕೆಟನ್ನು ಪಡೆದಿದ್ದು, ಲ್ಯಾಬ್ ನಲ್ಲಿ ಪರೀಕ್ಷೆ ನಡೆಸುತ್ತೇವೆ. ಅದು  ಒರಿಜಿನಲ್ ಹುಲಿಯುಗುರು ಆಗಿದ್ದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article