ಕಾವಲಯ್ಯ ಹಾಡಿಗೆ ನಟಿ ತಮನ್ನಾ ಮಾದಕ ನೃತ್ಯ: ವಿವಾದ ಎಬ್ಬಿಸಿದ ನಟ ಮನ್ಸೂರ್ ಆಲಿ‌ಖಾನ್ ಹೇಳಿಕೆ

ಚೆನ್ನೈ: ಸೂಪರ್​ ಸ್ಟಾರ್​ ರಜಿನಿಕಾಂತ್ ಅಭಿನಯದ ಜೈಲರ್​ ಸಿನಿಮಾ ಸೂಪರ್ ಹಿಟ್​ ಆಯಿತು. ಅದರಲ್ಲೂ ಈ ಸಿನಿಮಾದ ಕಾವಲಯ್ಯ ಹಾಡಂಥೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತು. ನಟಿ ತಮನ್ನಾ ಬಹಳ ಮಾದಕವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ರಿಲೀಸ್​ ಆಗುತ್ತಿದ್ದದೇ ತಡ ಪ್ರತಿಯೊಬ್ಬರೂ ಈ ಹಾಡಿಗೆ ಸೊಂಟ ಬಳುಕಿಸಿದ್ದೇ ಬಳುಕಿಸಿದ್ದು.

ಭಾರೀ ಖ್ಯಾತಿಗೊಳಗಾದ ಈ ಹಾಡನ್ನು ಇದೀಗ ತಮಿಳು ಸಿನಿಮಾದ ಖ್ಯಾತ ನಟ ಮನ್ಸೂರ್​ ಅಲಿ ಖಾನ್​ ಟೀಕಿಸಿದ್ದಾರೆ. ಈ ಹಾಡಿನಲ್ಲಿ ತಮನ್ನಾ ಡ್ಯಾನ್ಸ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಟಿ ತಮನ್ನಾ ಮಾದಕವಾಗಿ ಸೊಂಟ ಬಳುಕಿಸಿ, ಮೈಮಾಟ ಪ್ರದರ್ಶಿಸಿದ ‘ಕಾವಲಯ್ಯ’ ಹಾಡಿಗೆ ಸೆನ್ಸಾರ್ ಮಂಡಳಿಯಿಂದ ಹೇಗೆ ಅನುಮೋದನೆ ದೊರಕಿದೆ ಎಂದು ಮನ್ಸೂರ್ ಅಲಿ ಖಾನ್ ಪ್ರಶ್ನಿಸಿದ್ದಾರೆ. ತಾವು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸರಕು ಚಿತ್ರದ ಕೆಲವು ದೃಶ್ಯಗಳನ್ನು ಸೆನ್ಸಾರ್​ ಬೋರ್ಡ್​ ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಕಾವಲಯ್ಯ ಹಾಡನ್ನು ಉಲ್ಲೇಖಿಸಿ ಸೆನ್ಸಾರ್​ ಮಂಡಳಿಯ ನಡೆಯನ್ನು ಟೀಕಿಸಿದ್ದಾರೆ.

ಮನ್ಸೂರ್​ ಅವರು ಕಾವಲಯ್ಯ ಹಾಡನ್ನು ಟೀಕೆ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ತಮ್ಮ ಚಿತ್ರದ ದೃಶ್ಯಗಳನ್ನು ತೆಗೆದು ಹಾಕಿದರೆಂದು ಬೇರೆಯವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಬುದ್ಧಿ ಮಾತುಗಳನ್ನು ಮನ್ಸೂರ್​ ಅವರಿಗೆ ನೆಟ್ಟಿಗರು ಹೇಳಿದ್ದಾರೆ.



BREAKING NEWS
Loading latest news...
Join our WhatsApp Channel Powered By : Online Pudu