-->
1000938341
ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಯುವಕ ಹೃದಯಾಘಾತದಿಂದ ಸಾವು - ಹೆಲ್ತ್ ಬುಲೆಟಿನ್ ನಲ್ಲಿ ಭಯಾನಕ ಸತ್ಯ ಬಯಲು

ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಯುವಕ ಹೃದಯಾಘಾತದಿಂದ ಸಾವು - ಹೆಲ್ತ್ ಬುಲೆಟಿನ್ ನಲ್ಲಿ ಭಯಾನಕ ಸತ್ಯ ಬಯಲು


ತಿರುವನಂತಪುರಂ: ಕೇರಳದಲ್ಲಿ ಮಾಂಸಹಾರಿ ಹೋಟೆಲ್​ಗಳು ಇದೀಗ ಜೀವಕಂಟಕವಾಗುತ್ತಿದೆಯೇ ಎಂದು ಅನ್ನಿಸಲು ತೊಡಗಿದೆ. ಚಿಕನ್​ ಶೋರ್ಮಾ ತಿಂದು ಹದಿನಾರರ ಬಾಲಕಿ ಮೃತಪಟ್ಟ ಬಳಿಕವಂತೂ ಕೇರಳದ ಆಹಾರ ಸುರಕ್ಷತಾ ಇಲಾಖೆಯು ಹೋಟೆಲ್​ಗಳ ಮೇಲೆ ದಾಳಿ ಮಾಡಿ, ಈಗಾಗಲೇ ಅನೇಕ ಹೋಟೆಲ್​ಗಳಿಗೆ ಬೀಗ ಜಡಿದಿದೆ. ಈ ನಡುವೆಯೇ ಮತ್ತೊಂದು ಆತಂಕಕಾರಿ ದುರಂತವೊಂದು ಸಂಭವಿದೆ. ಶೋರ್ಮಾ ತಿಂದು ಫುಡ್​ ಪಾಯಿಸನ್​ ಆಗಿದ್ದ 24ರ ಯುವಕನೊಬ್ಬನು ದುರಂತವಾಗಿ ಮೃತಪಟ್ಟಿದ್ದಾನೆ.

ಕೇರಳದ ಕೊಟ್ಟಾಯಂ ನಿವಾಸಿ ರಾಹುಲ್​ ಡಿ ನಾಯರ್​ ಮೃತಪಟ್ಟ ಯುವಕ. ಅ.25ರಂದು ಮಧ್ಯಾಹ್ನ 2.55ಕ್ಕೆ ಈತ ಮೃತಪಟ್ಟಿದ್ದಾನೆ. ಈತ ಸೋಂಕಿನಿಂದ ಅಂಗಾಂಗ ವೈಫಲ್ಯಗೊಂಡು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ರಾಹುಲ್​ಗೆ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಹೆಲ್ತ್​ ಬುಲೆಟಿನ್​ ಪ್ರಕಾರ ಈತನಿಗೆ ಫುಡ್​ ಪಾಯಿಸನ್​ನಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ, ತಜ್ಞರ ಪರೀಕ್ಷೆಯ ಫಲಿತಾಂಶದ ಬಳಿಕವಢ ಸಾವಿನ ನಿಖರ ಕಾರಣವನ್ನು ತಿಳಿಯಲು ಸಾಧ್ಯ ಎಂದು ಹೆಲ್ತ್​ ಬುಲೆಟಿನ್ ಹೇಳಿದೆ.

ಗಂಭೀರ ಸ್ಥಿತಿಯಲ್ಲಿದ್ದ ರಾಹುಲ್​ಗೆ ಶನಿವಾರದಿಂದ ಕಾಕ್ಕನಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆತನನ್ನು ವೆಂಟಿಲೇಟರ್​ನಲ್ಲಿ ಇಡಲಾಗಿದ್ದು, ಈತನಿಗೆ ಮೂತ್ರಪಿಂಡ ವೈಫಲ್ಯದ ಬೆನ್ನಲ್ಲೇ ಹೃದಯಾಘಾತವಾಗಿದೆ. ಡಯಾಲಿಸಿಸ್​ ಮೂಲಕ ಆತನನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆದರೆ, ಆ ಬಳಿಕ ಸೆಪ್ಟಿಕ್ ಶಾಕ್‌ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ ರಾಹುಲ್​ ನಾಯರ್ ಕಾಕ್ಕನಾಡದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಎಸ್​ಎಫ್​ಒ ಕಂಪನಿಯಲ್ಲಿ ಗುತ್ತಿಗೆ ನೌಕರನಾಗಿದ್ದ. ಕಳೆದ ಗುರುವಾರ ಕಾಕ್ಕನಾಡದ ಲೇ ಹಯಾತ್​ ಹೋಟೆಲ್​ನಲ್ಲಿ ಶೋರ್ಮಾ ಆರ್ಡರ್​ ಮಾಡಿದ್ದ. ರಾಹುಲ್​ ಸ್ನೇಹಿತನೂ ಸಹ ಶೋರ್ಮಾ ಸೇವನೆ ಮಾಡಿದ್ದು, ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ರಾಹುಲ್​ಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಸಿಕೊಳ್ಳಲು ಆರಂಭವಾದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದ. ಆದರೆ, ಮತ್ತೆ ಆರೋಗ್ಯದಲ್ಲಿ ಏರುಪೇರು ಉಂಟಾದ್ದರಿಂದ ಭಾನುವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಹೆಲ್ತ್​ ಬುಲೆಟಿನ್​ ಪ್ರಕಾರ ಶೋರ್ಮಾ ತಿಂದ ಬಳಿಕ ಫುಡ್​ ಪಾಯಿಸನ್​ ಆಗಿದ್ದು, ಅಂಗಾಂಗಳ ವೈಫಲ್ಯದಿಂದ ರಾಹುಲ್​ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.

ರಾಹುಲ್ ಸಾವಿನ ಬಳಿಕ ಆತನ ಸ್ನೇಹಿತರು ತ್ರಿಕಕ್ಕರ ಪುರಸಭೆಯ ಆರೋಗ್ಯ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದು, ಪುರಸಭೆಯ ಆರೋಗ್ಯ ಮೇಲ್ವಿಚಾರಕ ಸಹದೇವನ್ ನೇತೃತ್ವದ ತಂಡ, ರಾಹುಲ್​ ಶೋರ್ಮಾ ಖರೀದಿಸಿದ ‘ಲೇ ಹಯಾತ್’ ಮೇಲೆ ದಾಳಿ ಮಾಡಿ ಹೋಟೆಲ್​ ಅನ್ನು ಸ್ಥಗಿತಗೊಳಿಸಿತು. ನಾಳೆ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ರಾಹುಲ್, ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.

Ads on article

Advertise in articles 1

advertising articles 2

Advertise under the article