ಜಿಲ್ಲಾಧಿಕಾರಿಯವರನ್ನು ವಶಕ್ಕೆ ಪಡೆಯುವ ವೇಳೆ ಬಟ್ಟೆ ಹರಿದ ಪೊಲೀಸರು: ಆರೋಪ

ಭೋಪಾಲ್:  ಇಲ್ಲಿನ ಛತ್ತರ್‌ಪುರದ ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ಸೋಮವಾರ 'ನ್ಯಾಯ ಪಾದ ಯಾತ್ರೆ' ನಡೆಸಿದ ವೇಳೆ ಪೊಲೀಸರು ಅವರನ್ನು ಬಲವಂತವಾಗಿ ವಶಕ್ಕೆ ಪಡೆಯುವ ವೇಳೆ ನಿಶಾ ಬೇಂಗ್ರೆ ಬಟ್ಟೆ ಹರಿದಿದೆ ಎಂದು ಆರೋಪಿಸಲಾಗಿದೆ.

ಭೋಪಾಲ್‌ನ ಬೋರ್ಡ್ ಚೌಕದ ಬಳಿ ಈ ಘರ್ಷಣೆ ಸಂಭವಿಸಿದೆ. ಅಲ್ಲಿ ನಿಶಾ ಬೇಂಗ್ರೆಯವರು ಕೆಲವು ಕಾಂಗ್ರೆಸ್ ನಾಯಕರೊಂದಿಗೆ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದರು.

ಆಮ್ಲಾದಿಂದ ಭೋಪಾಲ್‌ಗೆ ಪಾದಯಾತ್ರೆ ನಡೆಸುತ್ತಿದ್ದ ಬೇಂಗ್ರೆಯವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಿಸಿರುವುದರಿಂದ ರಾಜೀನಾಮೆಯನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಬೋರ್ಡ್ ಚೌಕ ತಲುಪಿದಾಗ ಪರಿಸ್ಥಿತಿ ಉಲ್ಬಣಗೊಂಡಿದೆ. ಪೊಲೀಸರು ನಿಶಾರನ್ನು ಬಲವಂತವಾಗಿ ಬಂಧಿಸಲು ಯತ್ನಿಸಿದ್ದು, ಈ ವೇಳೆ ದೈಹಿಕ ಘರ್ಷಣೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಬೇಂದ್ರೆ ಅವರ ಬಟ್ಟೆ ಹರಿದಿದೆ.

ಈ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ ಬೇಂಗ್ರೆ "ನನ್ನನ್ನು ಎಲ್ಲಾ ಧರ್ಮದವರ ಪರವಾಗಿ ಪ್ರಾರ್ಥನೆ ಸಲ್ಲಿಸುವುದರಿಂದ ತಡೆಯಲಾಗಿದೆ. ನಾನು ಇಡೀ ಸಮಾಜವನ್ನು ನನ್ನೊಂದಿಗೆ ಕರೆದೊಯ್ಯಲು ಬಯಸುತ್ತೇನೆ. ರಾಜ್ಯ ಸರ್ಕಾರವು ಮೂಲಭೂತವಾದಿ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕ ಪಿಸಿ ಶರ್ಮಾ ಮತ್ತು ಭೋಪಾಲ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೋನು ಸನಾ ಕೂಡ ಪ್ರತಿಭಟನೆಯ ಭಾಗವಾಗಿದ್ದರು. ಘಟನೆಯ ನಂತರ ನಿಶಾ ಬೇಂಗ್ರೆ ಮತ್ತು ಮೋನು ಸಕ್ಷೇನಾ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಸಕ್ಷೇನಾ ತಮ್ಮ ಹೇಳಿಕೆಯಲ್ಲಿ ಪೊಲೀಸರು ಬೇಂಗ್ರೆ ಅವರ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಗದ್ದಲದ ನಡುವೆಯೇ ಅಂಬೇಡ್ಕರ್ ಅವರ ಭಾವಚಿತ್ರವೂ ಹರಿದಿದೆ ಎನ್ನಲಾಗಿದೆ.