-->
ಆಕಾಶ್ ಬೈಜೂಸ್ ( AKASH BYJUS) ವಿದ್ಯಾರ್ಥಿಗಳಿಂದ ಉಡುಪಿಯ ಮಲ್ಪೆ ಬೀಚ್ ಸ್ವಚ್ಛತಾ ಅಭಿಯಾನ

ಆಕಾಶ್ ಬೈಜೂಸ್ ( AKASH BYJUS) ವಿದ್ಯಾರ್ಥಿಗಳಿಂದ ಉಡುಪಿಯ ಮಲ್ಪೆ ಬೀಚ್ ಸ್ವಚ್ಛತಾ ಅಭಿಯಾನ

 
ಉಡುಪಿ :  ಆಕಾಶ್ ಬೈಜೂಸ್ ಉಡುಪಿಯ ಮಲ್ಪೆ ಬೀಚ್ ನಲ್ಲಿ ತನ್ನ “ಜಂಕ್ ದಿ ಪ್ಲಾಸ್ಟಿಕ್” ಅಭಿಯಾನಕ್ಕೆ ಚಾಲನೆ ನೀಡಿದೆ.  

ಮಲ್ಪೆಯ ಕಡಲ ಕಿನಾರೆಯಲ್ಲಿ ಪ್ರವಾಸಿಗರು, ವೀಕ್ಷಕರು ಎಲ್ಲೆಂದರಲ್ಲಿ ಎಸೆದು ಹೋಗಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದುಹಾಕುವುದಾಗಿದೆ. ಪ್ರತಿದಿನ ಆಗಮಿಸುವ ನೂರಾರು ಪ್ರವಾಸಿಗರು ತಾವು ಬಳಸಿದ ಪ್ಲಾಸ್ಟಿಕ್ ಅನ್ನು ಬಿಸಾಡುತ್ತಿರುವುದು ಹೆಚ್ಚಾಗಿದ್ದು, ಇದರಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ತ್ಯಾಜ್ಯವನ್ನು ವಿಲೇವಾರಿ ಮಾಡುವುದರ ಜೊತೆಗೆ ಪ್ರವಾಸಿಗರಿಗೆ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಧ್ಯೇಯವಾಗಿದೆ.  


ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳುವುದನ್ನು ಬದಲಾಯಿಸಿಕೊಳ್ಳುವಂತೆ ಅರಿವು ಮೂಡಿಸುವುದು ಪ್ರಮುಖ ಗುರಿಯಾಗಿದೆ. ಅಲ್ಲದೇ, ಸಾಮೂಹಿಕವಾಗಿ ಪಾಲ್ಗೊಳ್ಳುವ ಮೂಲಕ ಕಡಲತೀರಗಳನ್ನು ಸ್ವಚ್ಛವಾಗಿಡುಗ ಮಹತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ.


ಉಡುಪಿಯ ಆಕಾಶ್ ಬೈಜೂಸ್ ನ ಬೋಧಕ ಸಿಬ್ಬಂದಿ ಮತ್ತು ಶಾಖೆಯ ಸಿಬ್ಬಂದಿ ಹಾಗೂ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.    


ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ ನ ಪ್ರಾದೇಶಿಕ ನಿರ್ದೇಶಕ ಧೀರಜ್ ಕುಮಾರ್ ಮಿಶ್ರಾ ಅವರು ಮಾತನಾಡಿ, “ಆಕಾಶ್ ಬೈಜೂಸ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಲು ನೆರವಾಗುವ ವಿಚಾರದಲ್ಲಿ ಉಡುಪಿಯನ್ನು ಸ್ವಚ್ಛಗೊಳಿಸಲು ಹಾಗೂ ನಮ್ಮ ಅದ್ಭುತ ನಗರ ನಿರ್ವಹಣೆಗೆ ಕೊಡುಗೆಯನ್ನು ನೀಡುವ ಭಾಗವಾಗಿರಲು ನಾವು ಸಂತೋಷಪಡುತ್ತೇವೆ ಎಂದರು.

ಮುಂಬರುವ ದಿನಗಳಲ್ಲಿ ದೇಶದ ಇತರ ಕರಾವಳಿ ನಗರಗಳಿಗೂ ಈ ಅಭಿಯಾನವನ್ನು ವಿಸ್ತರಣೆ ಮಾಡಲು ಆಕಾಶ್ ಬೈಜೂಸ್ ಉದ್ದೇಶಿಸಿದೆ. ಈಗಾಗಲೇ ಕಣ್ಣೂರು, ಕೋಝಿಕೋಡ್, ಚೆನ್ನೈ, ವಿಶಾಖಪಟ್ಟಣ, ಮುಂಬೈ ಮತ್ತು ಪಣಜಿಯ ಕಡಲ ಕಿನಾರೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಕಾಶ್ ಬೈಜೂಸ್ ನ ಹಿರಿಯ ಸಹಾಯಕ ನಿರ್ದೇಶಕ ಅನಿಲ್ ಕುಮಾರ್, ಸಹಾಯಕ ನಿರ್ದೇಶಕ ಶ್ಯಾಮ್ ಪ್ರಸಾದ್ ಮತ್ತು ಮುನ್ಸಿಪಲ್ ಆಯುಕ್ತರಾದ ರಾಯಪ್ಪ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article