ತುಲಾ ರಾಶಿ
ಕೇತು ಈ ಸಂದರ್ಭದಲ್ಲಿ ತುಲಾ ರಾಶಿಯ 12ನೇ ಮನೆಯಲ್ಲಿ ಸಂಚರಿಸುತ್ತದೆ. ಇದರಿಂದ ಇಲ್ಲಿಯವರೆಗೆ ಒತ್ತಡದಲ್ಲಿದ್ದ ತುಲಾ ರಾಶಿಯವರಿಗೆ ಇದರಿಂದ ಮುಕ್ತಿ ಸಿಗಲಿದೆ. ತುಲಾ ರಾಶಿ ಅವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹೊಸ ಕೆಲಸದಲ್ಲಿ ಸಂಗಾತಿಯ ಪೂರ್ಣ ಬೆಂಬಲವಿರುತ್ತದೆ.
ಮಿಥುನ ರಾಶಿ
ಕೇತು ಈ ಸಂದರ್ಭದಲ್ಲಿ ಮಿಥುನ ರಾಶಿಯ 4 ನೇ ಮನೆಗೆ ಚಲಿಸುತ್ತದೆ. ಹೀಗಾಗಿ ಅಕ್ಟೋಬರ್ 30ರಿಂದ ಮುಂದಿನ ಒಂದೂವರೆ ವರ್ಷ ಮಿಥುನ ರಾಶಿಯವರಿಗೆ ಶುಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಿಥುನ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ.
ಮಕರ ರಾಶಿ
ಕೇತು ಮಕರ ರಾಶಿಯ 9ನೇ ಮನೆಗೆ ಚಲಿಸುತ್ತದೆ. 9ನೇ ಮನೆ ಅದೃಷ್ಟದ ಮನೆಯಾಗಿದೆ. ಹೀಗಾಗಿ ಮುಂದಿನ ಒಂದೂವರೆ ವರ್ಷ, ಮಕರ ರಾಶಿಯವರು ಅದೃಷ್ಟದ ಬೆಂಬಲದೊಂದಿಗೆ ಅನೇಕ ಯಶಸ್ಸು ಮತ್ತು ಹಣವನ್ನು ಸಂಗ್ರಹಿಸುತ್ತಾರೆ.