-->
ಪತಿಯ ಸ್ನೇಹಿತನೊಂದಿಗೆ ಲವ್ವಿಡವ್ವಿ: ಪ್ರಿಯಕರನಿಗೇ 10ಸಾವಿರ ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿಸಿದ ಮಹಿಳೆ

ಪತಿಯ ಸ್ನೇಹಿತನೊಂದಿಗೆ ಲವ್ವಿಡವ್ವಿ: ಪ್ರಿಯಕರನಿಗೇ 10ಸಾವಿರ ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿಸಿದ ಮಹಿಳೆ

ಕಾರವಾರ: ಪತಿಯ ಸ್ನೇಹಿತನೊಂದಿಗೆ ಪ್ರೀತಿ - ಪ್ರಣಯ ಇಟ್ಕೊಂಡ ಮಹಿಳೆಯೊಬ್ಬಳು ಕೊನೆಗೆ ಪ್ರಿಯಕರನಿಗೇ 10 ಸಾವಿರ ರೂ. ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಪ್ರಕರಣ ಕುಮಟಾದಲ್ಲಿ ನಡೆದಿದೆ.

ಕುಮಟಾದ ದೇವಿಮನೆ ಘಟ್ಟದ ದೇವಸ್ಥಾನವೊಂದರ ಹಿಂಬದಿ ಸೆ.30ರಂದು ಅಪರಿಚಿತ ಮೃತದೇಹ ಪತ್ತೆಯಾಗಿದೆ‌. ತಕ್ಷಣ ಕುಮಟಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸುಮಾರು 40ರಷ್ಟು ವಯಸ್ಸಿನ ಪುರುಷನನ್ನು ಯಾರೋ ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿದ್ದರೆಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು.

ಆದ್ದರಿಂದ ಕುಮಟಾ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದರು. ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಆದರೆ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ಮಂಗಳೂರಿನಿಂದ ಶಿರಸಿಗೆ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಟಿಕೆಟ್‌ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದೆ. ತಕ್ಷಣ ಕುಮಟಾ ಪೊಲೀಸರು ಬೇರೆ ಜಿಲ್ಲೆಗಳ ನಾಪತ್ತೆ ಪ್ರಕರಣಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಆಗ ಬಾಗಲಕೋಟೆ ಜಿಲ್ಲೆಯ ಹೊಸೂರು ಗ್ರಾಮದ ಬಶೀರಸಾಬ್ ಎಂಬಾ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಆತನ ಇನ್ನೂ ಪತ್ತೆಯಾಗಿರುವುದು ಗೊತ್ತಾಗಿತ್ತು. ಪೊಲೀಸರು ಮೃತ ಬಶೀರಸಾಬ್‌ನ ಊರಿನಲ್ಲಿ ವಿಚಾರಣೆ ಮಾಡಲು ಮುಂದಾದಾಗ ಆತನಿಗೂ ಮತ್ತು ಆತನ ಪತ್ನಿಗೂ ಆಗಾಗ್ಗೆ ಗಲಾಟೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು

ಈ ಬಗ್ಗೆ ಮೃತ ಬಶೀರಸಾಬ್ ಪತ್ನಿ ರಾಜಮಾಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಹಿಂದೆ ಆಕೆ ಇದ್ದಾಳೆಂಬ ಶಂಕೆ ವ್ಯಕ್ತವಾಗಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರ ಪರಶುರಾಮ್, ಆತನ ಸ್ನೇಹಿತರಾದ ರವಿ ಹಾಗೂ ಆದೇಶ ಕುಂಬಾರ ಸೇರಿಕೊಂಡು ಕೊಲೆ ಮಾಡಿಸಿರುವ ವಿಷಯವನ್ನು ಬಾಯ್ದಿಟ್ಟಿದ್ದಳು. ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.

ಆರೋಪಿ ರಾಜಮಾಗೆ ಇಬ್ಬರು ಮಕ್ಕಳಿದ್ದು ಪತಿ ಬಶೀರಸಾಬ್ ನೊಂದಿಗೆ ಚೆನ್ನಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಳು. ಬಶೀರಸಾಬ್‌ ಕುರಿ ಕಾಯುವ ಕೆಲಸ ಮಾಡುತ್ತಿದ್ದ.  ಈ ನಡುವೆ ಬಶೀರ್ ಸಾಬ್ ನಿಗೆ ಸಹೋದರ ಖಾಸಿಂ ಪರಿಚಯದ ಮೇಲೆ ಆರೋಪಿ ಪರಶುರಾಮ್ ನ ಪರಿಚಯ ಆಗಿದೆ. ಆತ ಬಶೀರಸಾಬ್ ಮನೆಗೆ ಬಂದಾಗ ಆತನ ಪತ್ನಿ ರಾಜಮಾಳನ್ನು ಪರಿಚಯ ಮಾಡಿಕೊಂಡಿದ್ದ. ರಾಜಮಾ ಹಾಗೂ ಪರಶುರಾಮ್‌ ಇಬ್ಬರದ್ದು ಒಂದೇ ಊರಾಗಿದ್ದರಿಂದ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತ್ತು.

ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಪ್ರಾರಂಭವಾಗಿ ಈ ವಿಷಯ ಪತಿ ಬಶೀರಸಾಬ್ ಗೆ ಸಹ ತಿಳಿಯಿತು. ಬಶೀರ್ ಸಾಬ್ ಪತ್ನಿ ರಾಜಮಾಳೊಂದಿಗೆ ಗಲಾಟೆ ಮಾಡಿಕೊಳ್ಳಲು ಪ್ರಾರಂಭ ಮಾಡಿದ್ದನು. ಆತನ ಪತ್ನಿ ರಾಜಮಾ ತನ್ನ ತವರು ಮನೆಗೆ ಬಂದು ಉಳಿದಿದ್ದಳು. ಸೆ.26ರಂದು ಪ್ರಿಯಕರ ಪರಶುರಾಮನನ್ನು ಕರೆಯಿಸಿಕೊಂಡಿದ್ದ ರಾಜಮಾ, 10 ಸಾವಿರ ರೂಪಾಯಿ ಹಣವನ್ನು ನೀಡಿ ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಳು.

ಪರಶುರಾಮ್ ಬಶೀರಸಾಬ್‌ನನ್ನು ಪ್ರವಾಸಕ್ಕೆಂದು ತನ್ನ ಸ್ನೇಹಿತ ರವಿ ಮತ್ತು ಆದೇಶ ಎನ್ನುವವರ ಜೊತೆ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಸೆ.29ರಂದು ಮಂಗಳೂರು ಪ್ರವಾಸ ಮುಗಿಸಿ ವಾಪಸ್ ಬರುವಾಗ ದೇವಿಮನೆ ಘಟ್ಟದಲ್ಲಿ ಬಸ್‌ನಿಂದ ಇಳಿದಿದ್ದರು. ದೇವಸ್ಥಾನದ ಹಿಂದೆ ಕುಡಿಯಲು ನಾಲ್ವರು ಕುಳಿತಿದ್ದು ಬಶೀರಸಾಬ್‌ನಿಗೆ ಕುಡಿಸಿದ್ದಾರೆ. ಆತವಮದ್ಯದ ನಶೆಯಲ್ಲಿದ್ದಾಗಲೇ ಪರಶುರಾಮ್, ರವಿ ಹಾಗೂ ಆದೇಶ ಮೂರು ಜನ ಸೇರಿ ಬಶೀರಸಾಬ್‌ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಟಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.

ಕುಮಟಾ ಪೊಲೀಸ್ ಠಾಣೆ ಸಿಪಿಐ ತಿಮ್ಮಪ್ಪ ನಾಯ್ಕ ಪಿಎಸ್‌ಐ ನವೀನ್ ನಾಯ್ಕ ಹಾಗೂ ಸಂಪತ್ ನೇತೃತ್ವದಲ್ಲಿ ಪೊಲೀಸರ ತಂಡ ಕೆಲವೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article