-->
1000938341
ಬಸ್ಸಿನಲ್ಲಿ ಮೊಬೈಲ್ ನಂಬರ್ ಬರೆದು ಚೀಟಿ ನೀಡಿದ- ಮಹಿಳೆಯಿಂದ TWITTER ‌ನಲ್ಲಿ ಪೋಸ್ಟ್- ಆರೋಪಿ ಅರೆಸ್ಟ್

ಬಸ್ಸಿನಲ್ಲಿ ಮೊಬೈಲ್ ನಂಬರ್ ಬರೆದು ಚೀಟಿ ನೀಡಿದ- ಮಹಿಳೆಯಿಂದ TWITTER ‌ನಲ್ಲಿ ಪೋಸ್ಟ್- ಆರೋಪಿ ಅರೆಸ್ಟ್ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಮೊಬೈಲ್ ನಂಬರ್ ಇರುವ ಚೀಟಿ ಕೊಟ್ಟು ಕರೆ ಮಾಡಲು ತಿಳಿಸಿದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.ಸೆ.6  ರಂದು ಸಂತ್ರಸ್ಥ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣ ( ಟ್ವಿಟ್ಟರ್) ದಲ್ಲಿ ತಾನು ಪುತ್ತೂರಿನಿಂದ ಕೆ.ಎಸ್.ಆರ್.ಟಿ.ಸಿ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ತನ್ನ ಪಕ್ಕದಲ್ಲಿದ್ದ ಆರೋಪಿಯು ಅನುಚಿತವಾಗಿ ವರ್ತಿಸಿದ್ಧನು, ಬಸ್‌ನಿಂದ ಇಳಿಯುವ ವೇಳೆ ಚೀಟಿಯೊಂದರಲ್ಲಿ ಮೊಬೈಲ್ ನಂಬರನ್ನು  ನೀಡಿ  ಕರೆಮಾಡುವಂತೆ ಕೈ ಸನ್ನೆ  ಮಾಡಿರುವುದಾಗಿ ಪೋಸ್ಟ್ ಮಾಡಿದ್ದರು. ಈ  ಮೇರೆಗೆ, ಮಹಿಳೆಯಿಂದ ದೂರನ್ನು ಸ್ವೀಕರಿಸಿಕೊಂಡು ಬೆಳ್ಳಾರೆ  ಪೊಲೀಸ್ ಠಾಣೆಯಲ್ಲಿ ಕಲಂ : 354A(1)(i) 354(ಡಿ)ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿಎ ಹಾಗೂ ಈ ಬಗ್ಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article