-->
ಗಗನಸಖಿ ಹತ್ಯೆ ಪ್ರಕರಣ: ಜೈಲಿನಲ್ಲೇ  ಆರೋಪಿ SUCIDE

ಗಗನಸಖಿ ಹತ್ಯೆ ಪ್ರಕರಣ: ಜೈಲಿನಲ್ಲೇ ಆರೋಪಿ SUCIDE


ಮುಂಬೈ: ತರಬೇತಿ ಪಡೆಯುತ್ತಿದ್ದ ಗಗನಸಖಿ ರೂಪಾಲ್ ಓಗ್ರೆ ಹತ್ಯೆ ಪ್ರಕರಣದ ಆರೋಪಿ ಮುಂಬೈನ ಜೈಲಿನಲ್ಲಿ ಸುಸೈಡದ ಮಾಡಿಕೊಂಡಿದ್ದಾನೆ 

ಆರೋಪಿ ವಿಕ್ರಮ್ ಅತ್ವಾಲ್ ತನ್ನ ಪ್ಯಾಂಟ್ ನಿಂದಲೇ ಜೈಲಿನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಛತ್ತೀಸ್‌ಗಢ ಮೂಲದ ರೂಪಲ್ ಓಗ್ರೆ ಸೆಪ್ಟೆಂಬರ್ ಮೂರ ರಂದು ಉಪನಗರ ಅಂಧೇರಿಯ ಮರೋಲ್ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ಕುತ್ತಿಗೆ ಸೀಳಿದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಪತ್ತೆಗೆ 12 ತಂಡಗಳನ್ನು ಪೊಲೀಸರು ರಚಿಸಿದ್ದರು . ಅದರಂತೆ ಅದೇ ಫ್ಲಾಟ್ ನಲ್ಲಿ ಕೆಲಸ ಮಾಡುತ್ತಿದ್ದ ವಿಕ್ರಮ್ ಅತ್ವಾಲ್ ( VIKRAM ATWAL) ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.  ಅದರಂತೆ ಆತನನ್ನು ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ಇರಿಸಲಾಗಿತ್ತು. ಶುಕ್ರವಾರ ಅಂಧೇರಿ ಪೊಲೀಸ್ ಠಾಣೆಯ ಲಾಕಪ್ ನಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article