-->
ಅದ್ಭುತ ಶಿಕ್ಷಕ ಸುಬ್ರಹ್ಮಣ್ಯ ಕೆ ಭಟ್-ರಶ್ಮಿ ಪಟಗಾರ

ಅದ್ಭುತ ಶಿಕ್ಷಕ ಸುಬ್ರಹ್ಮಣ್ಯ ಕೆ ಭಟ್-ರಶ್ಮಿ ಪಟಗಾರ




ಶಿಕ್ಷಕರ ಅತ್ಯುನ್ನತ ಸಾಧನೆ ಎಂದರೆ ಶಿಕ್ಷಕರ ಪಟ್ಟದಿಂದ ಗುರುವಾಗುವುದು. ಆ ಗುರುವಿನ ಋಣವೋ ಹೇಳುತಿರದು. ನನ್ನ ಹದಿನಾರು ವರ್ಷದ ಅಧ್ಯಯನದ ಅವಧಿಯಲ್ಲಿ ಸಾಕಷ್ಟು ಶಿಕ್ಷಕರಿಂದ ಪಾಠಗಳನ್ನು ಕೇಳಿರುವೆ. ಆದರೆ ಪಠ್ಯ ಸಂಬಂಧಿತ ಪಾಠಗಳೊಂದಿಗೆ ಜೀವನ ಪಾಠಗಳನ್ನು ತಿಳಿಸುವ ಶಿಕ್ಷಕರೆಷ್ಟು ದೊರೆತಿಹರು ಎಂದು ಅವಲೋಕಿಸಿದಾಗ , ಅದ್ಭುತ ಶಿಕ್ಷಕರಾದ ಶ್ರೀಯುತ ಸುಬ್ರಹ್ಮಣ್ಯ ಕೆ. ಭಟ್ ಗುರುಗಳ ಪಾಠಗಳು ಕಣ್ಮುಂದೆ ಬಂದಿತು. ಸಾಮಾನ್ಯರಾದವರೂ ಸಹ ಪಾಠ ಕಲಿಸಬಹುದು. ಆದರೆ ಪಾಠದ ಸಾಲುಗಳನ್ನು , ರೋಮಾಂಚಕ ಘಟನೆಗಳ ವೈಖರಿಯ ವಿವರಿಸುವಾಗ ಹರ್ಷೋದ್ಗಾರ ದುಃಖ ದುಮ್ಮಾನಗಳ ಭಾವ ಲಹರಿಯ ತೋರ್ಪಡಿಸುವ ನನ್ನ ನೆಚ್ಚಿನ ಗುರುಗಳ ಕುರಿತು ವರ್ಣಿಸಲು ದೊರೆಯುವ ಪದಗಳೆಲ್ಲ ಸಣ್ಣವೇ.....

 ದಿನ ಕಳೆದಂತೆ ತಮ್ಮೆಲ್ಲ ಜೀವನಾನುಭವಗಳ ಧಾರೆಯ ಸುರಿಸಿ ನಮ್ಮನ್ನೆಲ್ಲಾ ಸುಂದರ ಜೀವನ ಪಥದತ್ತ ಕೊಂಡೊಯ್ಯುತ್ತಾ ಶ್ರಮಿಸುತ್ತಿರುವ ಹಾಗೂ ಶಿಕ್ಷಕ ಸ್ಥಾನದಿಂದ ಗುರುವಾಗುತ್ತಿರುವ ನನ್ನ ಗುರುಗಳಿಗೆ ಧನ್ಯವಾದ ತಿಳಿಸಲು ಇದಕ್ಕಿಂತ ಸುಕ್ಷಣ ಸಿಗಲಾರದು..
 ನನ್ನಂತಹ ಸಾಧಾರಣರಲ್ಲೂ ಅಸಾಧಾರಣ ಅಂಶಗಳ ಎತ್ತಿ ಹಿಡಿದು ಪ್ರತಿಯೊಬ್ಬರ ಅಭಿವ್ಯಕ್ತಿಯ ಗೌರವಿಸುವ ನನ್ನ ಗುರುಗಳ ಮೇಲೆ ಗೌರವದ ಮಹಾಪರ್ವವೇ ಸೃಷ್ಟಿಯಾಗಿದೆ ನಿಮ್ಮ ಪ್ರಯತ್ನ ಹಾಗೂ ಪರಿಶ್ರಮಕ್ಕೆ ನಾನು ಸದಾ ಚಿರಋಣಿ ..
ಹ್ಯಾಪಿ ಟೀಚರ್ಸ್ ಡೇ ಸರ್

ರಶ್ಮಿ ಪಟಗಾರ
ಬಿ.ಇಡಿ. ವಿದ್ಯಾರ್ಥಿನಿ
ಕಮಲಾ ಬಾಳಿಗಾ ಕಾಲೇಜು, ಕುಮಟಾ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article