ಸಿಲ್ಕ್ ಸ್ಮಿತಾ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ: ಸಂಚಲನ ಸೃಷ್ಟಿಸಿದ ಕಾಲಿವುಡ್ ನಟನ ಹೇಳಿಕೆ



ಚೆನ್ನೈ: ಕಾಲಿವುಡ್​ ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಯೂಟ್ಯೂಬ್​ ಚಾನೆಲ್​ ಮೂಲಕ ನಟ ಹಾಗೂ ನಟಿಯರ ಗಾಸಿಪ್​ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿದ್ದಾರೆ‌. ಈ ಮೂಲಕ‌ ಕಲಾವಿದರ ಆಕ್ರೋಶಕ್ಕೂ ಕಾರಣರಾಗಿದ್ದಾರೆ. ಇದೀಗ ರಂಗನಾಥನ್​, ದಿವಂಗತ ನಟಿ ಸಿಲ್ಕ್​ ಸ್ಮಿತಾ​ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ತನ್ನ ಮಾದಕ ಹಾವಭಾವದ ಮೂಲಕ ಎಲ್ಲರ ಗಮನ ಸೆಳೆದ ನಟಿ ಸಿಲ್ಕ್​ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಸಾವಿಗೀಡಾದ್ದರು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು. ಅಂದು ಬಹುಬೇಡಿಕೆಯ ನಟಿಯಾಗಿದ್ದ ಸಿಲ್ಕ್​ ಸ್ಮಿತಾ ಐಟಂ ಸಾಂಗ್​ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ವಿವಾಹವಾಗಿ ವಿಚ್ಛೇದನ ಪಡೆದಿದ್ದರು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು. ಇದೀಗ ಸಿಲ್ಕ್​ ಸ್ಮಿತಾ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರ ಬಗ್ಗೆ ಬೈಲ್ವಾನ್​ ರಂಗನಾಥನ್​ ಮಾತನಾಡಿದ್ದು, ಕಾಲಿವುಡ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶವಾಗಾರದಲ್ಲಿರುವ ನೌಕರರು ಕುಡಿದ ಅಮಲಿನಲ್ಲಿ ಕೆಲಸ ಮಾಡುತ್ತಾರೆ. ಇದೇ ಕಾರಣಕ್ಕೆ ಶವಾಗಾರದಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಶವಾಗಾರಗಳು ಇಂದಿನಂತೆ ಅಂದು ಸ್ವಚ್ಛವಾಗಿರಲಿಲ್ಲ. ನೈರ್ಮಲ್ಯವಾಗಿರಲಿಲ್ಲ. ಹೆಚ್ಚು ದುರ್ವಾಸನೆ ಬೀರುವ ಸ್ಥಳವಾಗಿತ್ತು. ಅಲ್ಲಿ ಕೆಲಸ ಮಾಡುವವರಿಗೆ ಸ್ವಯಂ ಪ್ರಜ್ಞೆ ಇರುವುದಿಲ್ಲ. ಅಲ್ಲಿನ ನೌಕರರು ಬೆಳಗ್ಗೆ ಕೆಲಸ ಆರಂಭಿಸಿದಾಗಿನಿಂದ ಕುಡಿದಿರುತ್ತಾರೆ. ಸಾಮಾನ್ಯವಾಗಿ, ಶವಪರೀಕ್ಷೆಯ ಸಮಯದಲ್ಲಿ, ವೈದ್ಯರು ನಿಂತು ಹೇಳುತ್ತಾರೆ. ಸಿಬ್ಬಂದಿ ದೇಹವನ್ನು ಕತ್ತರಿಸುತ್ತಾರೆ.

ಸಿಲ್ಕ್ ಸ್ಮಿತಾಳನ್ನು ಕಣ್ಮನ ಸೆಳೆಯುವ ಸೌಂದರ್ಯದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಆಸೆ ಎಲ್ಲರಿಗೂ ಇತ್ತು. ಹೀಗಿರುವಾಗ ಕುಡಿದು ಪ್ರಜ್ಞಾಹೀನರಾಗಿರುವ ನೌಕರರು ಹೇಗೆ ತಾನೇ ಶಾಂತವಾಗಿರುತ್ತಾರೆ? ಅವರು ತಮ್ಮನ್ನು ತಾವು ಮರೆತು ಆಕೆಯ ಮೃತದೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಅವಕಾಶಗಳು ಹೆಚ್ಚಿವೆ.

ತಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಶವ ಪರೀಕ್ಷೆ ನಡೆದ ಸ್ಥಳಕ್ಕೆ ಹೋಗಿ ಖುದ್ದು ನೋಡಿದ್ದೆ. ನಾನು ಐದು ಸೆಕೆಂಡುಗಳಿಗಿಂತ ಹೆಚ್ಚು ಕಾಲ ಅಲ್ಲಿ ಉಳಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಬೈಲ್ವಾನ್​ ರಂಗನಾಥನ್​ ಆಡಿರುವ ಮಾತು ಇದೀಗ ಭಾರೀ ಸಂಚಲನ ಸೃಷ್ಟಿ ಮಾಡಿದೆ.