-->
1000938341
ತಾನು ತಾಯಿ ಗರ್ಭದಲ್ಲಿದ್ದಾಗಲೇ ಗರ್ಭಪಾತ ಮಾಡುವಂತೆ ಹೇಳಲಾಗಿತ್ತು : ನಟಿ ಶಿಲ್ಪಾ ಶೆಟ್ಟಿ

ತಾನು ತಾಯಿ ಗರ್ಭದಲ್ಲಿದ್ದಾಗಲೇ ಗರ್ಭಪಾತ ಮಾಡುವಂತೆ ಹೇಳಲಾಗಿತ್ತು : ನಟಿ ಶಿಲ್ಪಾ ಶೆಟ್ಟಿ


ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ‘ಸುಖಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರು ತಮ್ಮ ಜೀವನದ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿವಾಹಿನಿಯೊಂದಿಗೆ ಮಾತನಾಡಿದ ಅವರು, ತಾನು ಗರ್ಭದಲ್ಲಿದ್ದಾಗ ತಾಯಿಯ ಪರಿಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಗರ್ಭಪಾತ ಅನಿವಾರ್ಯ ಎಂದು ಎಲ್ಲರೂ ಭಾವಿಸಿದ್ದರು. ವೈದ್ಯರೂ ತಾಯಿಗೆ ಗರ್ಭಪಾತ ಮಾಡುವಂತೆ ಸೂಚಿಸಿದರು. ಏಕೆಂದರೆ ನನ್ನ ತಾಯಿಗೆ ನಿರಂತರವಾಗಿ ರಕ್ತಸ್ರಾವವಾಗುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಹುಟ್ಟಿದ್ದೇನೆ ಎಂದು ಶಿಲ್ಪಾ ಹೇಳಿದ್ದಾರೆ.

ನನ್ನ ಹುಟ್ಟಿನ ಹಿಂದೆ ಯಾವುದೋ ಬಲವಾದ ಕಾರಣ ಇದ್ದಿರಬೇಕು. ನನಗೆ ಇದೊಂದು ಪುನರ್ಜನ್ಮ. ಪ್ರತಿಯೊಬ್ಬರ ಜೀವನದಲ್ಲೂ ಹಲವಾರು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಅವರಲ್ಲಿ ಸ್ಫೂರ್ತಿ ತುಂಬಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತೇನೆ. ಬದುಕು ಯಾರಿಗೂ ಸುಲಭವಲ್ಲ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿಗೆ ವಯಸ್ಸು 50 ಸಮೀಪಿಸಿದರೂ ಅವರು ಇನ್ನೂ ಅಚ್ಚಳಿಯದ ಸೌಂದರ್ಯ ಉಳಿಸಿಕೊಂಡಿದ್ದಾರೆ. ಉದ್ಯಮಿ ರಾಜ್ ಕುಂದ್ರಾರನ್ನು ಮದುವೆಯಾಗಿರುವ ಅವರು ‘ಸುಖಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ‘ಸುಖಿ’ ಚಿತ್ರದ ಮೂಲಕ ಸೋನಾಲ್ ಜೋಶಿ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮಿತ್ ಸೌಧ್, ಕುಶಾ ಕಪಿಲಾ, ಪಾವ್ಲೀನ್ ಗುಜ್ರಾಲ್, ದಿಲ್ನಾಜ್ ಇರಾನಿ, ಚೈತನ್ಯ ಚೌಧರಿ ಮತ್ತು ಜ್ಯೋತಿ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಲಿದೆ.

Ads on article

Advertise in articles 1

advertising articles 2

Advertise under the article