ಹೈದರಾಬಾದ್ ಗೆ ಬಂದಿಳಿದ ಪಾಕ್ ಕ್ರಿಕೆಟ್ ಆಟಗಾರರಿಗೆ ವಿಶೇಷ ಮೆನು ತಯಾರಿ


ಹೈದರಾಬಾದ್: ಪಾಕಿಸ್ತಾನಿ ಆಟಗಾರರು ಕ್ರಿಕೆಟ್ ಪಂದ್ಯಾಟಕ್ಕೆ ಹೈದರಾಬಾದ್‌ಗೆ ಬಂದಿಳಿದ್ದಾರೆ‌. ಅವರನ್ನು ಹೈದರಾಬಾದ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಆತ್ಮೀಯ ಸ್ವಾಗತ ಕೋರಿದರು. ಪಾಕ್​​ ಕ್ರಿಕೆಟ್ ತಂಡ ಆಟಗಾರರಿಗೆ ಹೈದರಾಬಾದ್​​ನಲ್ಲಿ ವಿಶೇಷವಾಗಿ ಆಹಾರದ ಮೆನು ತಯಾರಾಗಿದೆ.

ಸದ್ಯ ಪಾಕ್ ಆಟಗಾರರನ್ನು ಬಂಜಾರಾ ಹಿಲ್ಸ್‌ನ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಉಳಿಸಲಾಗಿದೆ. ಅವರನ್ನು ಬಿಗಿ ಭದ್ರತೆಯಲ್ಲಿ ಶಂಶಾಬಾದ್ ವಿಮಾನ ನಿಲ್ದಾಣದಿಂದ ಪಾರ್ಕ್ ಹಯಾತ್ ಹೋಟೆಲ್‌ಗೆ ಕರೆ ತರಲಾಗಿದೆ. ಹೈದರಾಬಾದ್‌ನಲ್ಲಿ ತಮಗೆ ದೊರೆತ ಸ್ವಾಗತಕ್ಕೆ ಪಾಕಿಸ್ತಾನಿ ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದರು.


15 ಮಂದಿ ಆಟಗಾರರು ದುಬೈನಿಂದ ನೇರವಾಗಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಇದೇ ವೇಳೆ ಹೈದರಾಬಾದ್ ನಲ್ಲಿ ಪಾಕಿಸ್ತಾನ ಹಲವು ಪಂದ್ಯಗಳನ್ನು ಆಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನವು ಸೆಪ್ಟೆಂಬರ್ 29 ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ.

ಪಾಕಿಸ್ತಾನಿ ಆಟಗಾರರಿಗೆ ಆಯೋಜಕರು ಊಟದ ವ್ಯವಸ್ಥೆ ಮಾಡಿದ್ದಾರೆ. ಹೈದರಾಬಾದ್ ಬಿರಿಯಾನಿ ಮತ್ತು ಮಟನ್ ಕರಿಯೊಂದಿಗೆ ವಿಶೇಷ ಮೆನುವನ್ನು ಏರ್ಪಡಿಸಲಾಗಿದೆ. ಇವುಗಳ ಜತೆಗೆ ಗ್ರಿಲ್ಡ್ ಲಂಚ್ ಚಾಪ್ಸ್, ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ನೀಡಲಾಯಿತು. ವಿಶೇಷವಾಗಿ ಪಾಕಿಸ್ತಾನದ ಆಟಗಾರರಿಗಾಗಿ ಬೇಯಿಸಿದ ಬಾಸ್ಮತಿ ಅಕ್ಕಿ, ಬೊಲೊಗ್ನೀಸ್ ಸಾಸ್‌ನೊಂದಿಗೆ ಸ್ಪಾಗೆಟ್ಟಿ ಮತ್ತು ವೆಬ್ ಪುಲಾವ್ ಅನ್ನು ಮೆನುವಿನಲ್ಲಿ ಸೇರಿಸಲಾಗಿದೆ.